ಸುರಕ್ಷತೆ

ಹೊಂಬಾಳೆ ಸಮೂಹವು ಸಿಬ್ಬಂದಿಯ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ. ಯೋಜನಾ ತಾಣಗಳು ಮತ್ತು ಕಾರ್ಯಕ್ಷೇತ್ರಗಳಲ್ಲಿ ಸಿಬ್ಬಂದಿಯ ಸುರಕ್ಷತೆಗೆ ಹೆಚ್ಚು ಗಮನ ಕೊಡಲಾಗುತ್ತದೆ. ಸಿಬ್ಬಂದಿಯ ಆರೋಗ್ಯ, ಸುರಕ್ಷತೆ ದೃಷ್ಟಿಯಲ್ಲಿರಿಸಿಕೊಂಡು ನಮ್ಮ ಕಾರ್ಯಕ್ಷೇತ್ರಗಳನ್ನು ಅಪಘಾತ ಮುಕ್ತವಾಗಿರಿಸಲು ಪರಿಶ್ರಮಿಸಲಾಗುತ್ತದೆ. ಮುಂಜಾಗ್ರತೆಯಿಂದ ಯಾವುದೇ ಅವಘಡವನ್ನು ತಡೆಯಬಹುದು ಎಂಬುದು ನಮ್ಮ ಬಲವಾದ ನಂಬುಗೆಯಾಗಿದೆ. ನಾವು ಅನುಷ್ಠಾನಗೊಳಿಸುವ ಪ್ರತಿಯೊಂದು ಯೋಜನೆಯಲ್ಲೂ ತಾಂತ್ರಿಕ ಕಾರ್ಯಕ್ಷೇತ್ರ ಅನುಸರಣಾ ವಿಧಾನಗಳು ಮತ್ತು ತರಬೇತಿ ಕಾರ್ಯಕ್ರಮಗಳ ಸಂಯೋಜನೆಯ ತತ್ವವನ್ನು ಪಾಲಿಸುತ್ತೇವೆ.

ಹೊಂಬಾಳೆ ಸಮೂಹವು ಸುರಕ್ಷಾ ವ್ಯವಸ್ಥೆಗಳು, ನಿರ್ಮಾಣ ತಾಣದಲ್ಲಿ ಹಾಗೂ ಬಾಹ್ಯ ತಾಣದಲ್ಲಿ ನೀಡಲಾಗುವ ತರಬೇತಿ ಮತ್ತು ವರ್ತನೆ ಆಧಾರಿತ ಸುರಕ್ಷಾ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳುತ್ತದೆ. ಯೋಜನೆಯಿಂದ ಮೊದಲುಗೊಂಡು ಯೋಜನೆ ಪೂರ್ತಿಯಾಗುವ ತನಕ, ಬೋರ್ಡ್ ರೂಮ್ ನಿಂದ ನಿವೇಶನ ತಾಣದಲ್ಲಿ ಮಾನವ ಸಂಪನ್ಮೂಲ ನಿಯೋಜನೆಯವರೆಗೆ ಪ್ರತಿಯೊಂದು ಹಂತವನ್ನೂ ಅಪಘಾತ ಶೂನ್ಯವಾಗಿಸಲು ಒತ್ತು ನೀಡುತ್ತದೆ. ಸುರಕ್ಷತೆಗೆ ಭಂಗ ಕಂಡುಬಂದ ತಕ್ಷಣವೇ ಯಾವುದೇ ಸಿಬ್ಬಂದಿಯಾದರೂ ಕೆಲಸವನ್ನು ನಿಲುಗಡೆ ಮಾಡಿಸಬಹುದಾಗಿದೆ.

ನಾವು ಅನುಸರಿಸುವ ಸುರಕ್ಷೆ ಮತ್ತು ಆರೋಗ್ಯ ಪೂರಕ ಉಪಕ್ರಮಗಳನ್ನೇ ನಮ್ಮ ಉಪ ಗುತ್ತಿಗೆದಾರರು ಮತ್ತು ನಿರ್ಮಾಣ ಪಾಲುದಾರ ಸಂಸ್ಥೆಗಳು ಕೂಡ ಅಳವಡಿಸಿಕೊಂಡು ಅನುಷ್ಠಾನಗೊಳಿಸಲು ಅನುವು ಕಲ್ಪಿಸುತ್ತೇವೆ. ಇದರ ಫಲವಾಗಿ ಹಲವಾರು ಗಂಡಾಂತರಕಾರಿ ವಾತಾವರಣಗಳಲ್ಲಿ ಕೂಡ ಸುರಕ್ಷತೆಯೊಂದಿಗೆ ಕೆಲಸ ಮಾಡಲು ಸಾಧ್ಯವಾಗಿದೆ. ಈ ನಮ್ಮ ಬದ್ಧತೆಯು ಸಿಬ್ಬಂದಿಗೆ ಹೆಚ್ಚಿನ ಸುರಕ್ಷೆ ಒದಗಿಸಿದ್ದರೆ ಗ್ರಾಹಕರಿಗೆ ಸಂತೃಪ್ತಿ ನೀಡುತ್ತಿದೆ.