ಮೊನೊಲಿಥಿಕ್ ಕನ್ಸ್ಟ್ರಕ್ಷನ್ ತಂತ್ರಜ್ಞಾನ

ಅಲ್ಯುಮಿನಿಯಂ ಫಲಕಗಳಿಂದ ಮೊನೊಲಿಥಿಕ್ ಕನ್ಸ್ಟ್ರಕ್ಷನ್ ತಂತ್ರಜ್ಞಾನ - ನಿರ್ಮಾಣ ವಿಧಾನ - ಮಿವಾನ್ ಶಟರಿಂಗ್ ನಿರ್ಮಾಣ ತಾಂತ್ರಿಕತೆ:

ಮಿವಾನ್ ಶಟರಿಂಗ್ ಕ್ಷಿಪ್ರ ವೇಗದ ನಿರ್ಮಾಣ ತಂತ್ರಜ್ಞಾನವಾಗಿದೆ. ಅಲ್ಯುಮಿನಿಯಂ ಫಲಕಗಳ ಜೋಡಣಾ ವ್ಯವಸ್ಥೆಯ ನೆರವಿನಿಂದ ಇದು ಕಟ್ಟಡಕ್ಕೆ ಬಲ ಮತ್ತು ಬಾಳಿಕೆಯನ್ನು ತಂದುಕೊಡುತ್ತದೆ.

ಆಧುನಿಕ ಮತ್ತು ಸೃಜನಶೀಲ ನಿರ್ಮಾಣ ತಾಂತ್ರಿಕತೆಗಳನ್ನು ಆಧರಿಸಿ ಕೈಗೆಟುಕುವ ದರದಲ್ಲಿ ಸರ್ವರಿಗೂ ಸೂರು ಒದಗಿಸಬೇಕಾದ ಅವಶ್ಯಕತೆ ಇಂದು ಇದೆ. ಮಿವಾನ್ ಶಟರಿಂಗ್ ನಿರ್ಮಾಣ ವಿಧಾನ ಅದನ್ನು ಸಾಕಾರಗೊಳಿಸಲು ಪೂರಕವಾದ ತಾಂತ್ರಿಕತೆಗಳಲ್ಲಿ ಒಂದಾಗಿದೆ. ಮೊನೊಲಿಥಿಕ್ ಕನ್ಸ್ಟ್ರಕ್ಷನ್ ತಂತ್ರಜ್ಞಾನ ಯೋಜನೆಗಳಿಗೆ ಇದು ಹೇಳಿಮಾಡಿಸಿದ ತಾಂತ್ರಿಕತೆ ಎಂಬ ಕಾರಣಕ್ಕಾಗಿ ಇದು ಜನಪ್ರಿಯವಾಗಿದೆ.

ರಾಷ್ಟ್ರದ ಪ್ರತಿಯೊಂದು ಕುಟುಂಬಕ್ಕೂ 2022ರ ವೇಳೆಗೆ ವಸತಿ ಕಲ್ಪಿಸಬೇಕು ಎಂಬುದು ಭಾರತ ಸರ್ಕಾರದ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಈ ತಾಂತ್ರಿಕತೆಯ ಬಳಕೆಗೆ ನಮ್ಮ ದೇಶದಲ್ಲಿ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ.

ನಿರ್ಮಾಣ ತಂತ್ರಜ್ಞಾನ

ಉಕ್ಕಿನಿಂದ ಬಲವರ್ಧಿತಗೊಂಡ ಗೋಡೆ ನಿರ್ಮಾಣ- ಕಟ್ಟಡಕ್ಕೆ ನಿರ್ದಿಷ್ಟ ಆಕೃತಿ ನೀಡಲು ಹಾಗೂ ಅಗತ್ಯ ಬಲದ ಅರ್ಧದಷ್ಟು ಬಲ ಬರುವ ತನಕ ಕಾಂಕ್ರೀಟ್ ಗೆ ಆಸರೆ ಒದಗಿಸಲು ಉಕ್ಕಿನ ಸರಳುಗಳ ಗೋಡೆ ನಿರ್ಮಿಸಲಾಗುತ್ತದೆ. ಉಕ್ಕಿನ ಮೆಷ್ ನ ಸುತ್ತಲೂ ಅಲ್ಯುಮಿನಿಯಂ ಫಲಕಗಳನ್ನು ಜೋಡಿಸಲಾಗುತ್ತದೆ. ಕಾರ್ಖಾನೆಯಲ್ಲಿ ತಯಾರಾದ ಈ ಅಲ್ಯುಮಿನಿಯಂ ಫಲಕಗಳನ್ನು ನೇರವಾಗಿ ಕಟ್ಟಡ ನಿರ್ಮಾಣ ತಾಣಕ್ಕೆ ತಂದು ಅಳವಡಿಸಲಾಗುತ್ತದೆ.

ಅಲ್ಯುಮಿನಿಯಂ ಫಲಕ ಕೂರಿಸುವಿಕೆ: ಸ್ಟೀಲ್ ಸರಳುಗಳ ಬಲವರ್ಧಿತ ಗೋಡೆಗೆ ಹೊಂದಿಕೊಂಡಂತೆ ಮುಂಚಿತವಾಗಿಯೇ ಫ್ಯಾಬ್ರಿಕೇಟ್ ಮಾಡಿದ ರೂಮ್ ಅಳತೆಗೆ ತಕ್ಕುದಾದ ಗೋಡೆಗಳು ಮತ್ತು ನೆಲಹಾಸುಗಳನ್ನು (ಫ್ಲೋರ್ ಸ್ಲ್ಯಾಬ್ ಗಳನ್ನು) ಕೂರಿಸಲಾಗುತ್ತದೆ. ಅಲ್ಯುಮಿನಿಯಂ ಮಿಶ್ರಲೋಹದ ಈ ಸ್ಲ್ಯಾಬ್ ಗಳನ್ನು ನಿಖರ ಅಳತೆಗೆ ತಕ್ಕಂತೆ ಮಾಡಲಾಗಿರುತ್ತದೆ. ಇವುಗಳ ನಿರ್ವಹಣೆ ಕೂಡ ಸುಲಭ. ಕಿಟಕಿಗಳು, ಡಕ್ಟ್ ಗಳು (ಕೊಳವೆಗಳು, ಬಾಗಿಲುಗಳು, ಪಾವಟಿಗೆಗಳು, ಫಸೇಡ್ ಪ್ಯಾನೆಲ್ ಗಳು, ಲಾಫ್ಟ್ ಸ್ಲ್ಯಾಬ್ ಗಳು ( ಅಡುಗೆ ಮನೆಯಲ್ಲಿ ಸಪೋರ್ಟಿಂಗ್ ವಾಲ್ ಗಳೊಂದಿಗೆ ಇರುವ ಸ್ಲ್ಯಾಬ್ ಗಳು) ಮತ್ತು ಸಜ್ಜಾಗಳನ್ನು ಜೋಡಿಸಲು ಅನುಕೂಲವಾಗುವಂತೆ ಇವನ್ನು ರಚಿಸಲಾಗಿರುತ್ತದೆ. ಈ ಫಲಕಗಳನ್ನು ‘ಪಿನ್ ಅಂಡ್ ವೆಡ್ಜ್’ ಮಾದರಿಯಲ್ಲಿ ಒಂದಕ್ಕೊಂದು ಜೋಡಿಸಲಾಗುತ್ತದೆ. ಲಂಬ ಮೇಲ್ಮೈ ಮತ್ತು ಸಮತಲ ಮೇಲ್ಮೈಗೆ ಕಾಂಕ್ರೀಟ್ ಆಕೃತಿ ನಿರ್ಮಾಣಗೊಂಡ ತಕ್ಷಣ (ಪ್ರಾಪಿಂಗ್ ವ್ಯವಸ್ಥೆಯ ಆಸರೆ ಒದಗಿಸಿ) ಇವನ್ನು ಶೀಘ್ರವಾಗಿ ಬಿಚ್ಚಿಬಿಡಬಹುದು.

ಕಾಂಕ್ರೀಟ್ ಸುರಿಯುವಿಕೆ- ಅಲ್ಯುಮಿನಿಯಂ ಫಲಕಗಳನ್ನು ಎರಕಹೊಯ್ದ ನಂತರ ಎಸ್ ಸಿಸಿ ಮಾದರಿಯಂತಹ ಶ್ರೇಷ್ಠ ಗುಣಮಟ್ಟದ ಕಾಂಕ್ರೀಟ್ ನ್ನು ಸುರಿಯಲಾಗುತ್ತದೆ. ಇದಕ್ಕಾಗಿ ರಿಚ್ ಮಿಕ್ಸ್ ನಿಂದ ವಿಶೇಷವಾಗಿ ಸಿದ್ಧಪಡಿಸಲಾದ, ಸರಾಗವಾಗಿ ಪಸರಿಸಿಕೊಳ್ಳುವ ಕಾಂಕ್ರೀಟ್ ತಯಾರಿಸಿಕೊಳ್ಳಲಾಗಿರುತ್ತದೆ. ಈ ಕಾಂಕ್ರೀಟ್ ಎರಕ ಹೊಯ್ದ ಫಲಕಗಳ ಮೂಲೆ ಮೂಲೆಯೆಡೆಗೂ ಸರಾಗಹಾಗಿ ಹರಿದು ಫಲಕಗಳ ಆಕೃತಿಯನ್ನೇ ಪಡೆದುಕೊಳ್ಳುತ್ತದೆ. ನಂತರ ಈ ಫಲಕಗಳನ್ನು ಸಂಪೂರ್ಣವಾಗಿ ತೆಗೆಯಲಾಗುತ್ತದೆ. ಅಲ್ಲಿಗೆ ಉಕ್ಕಿನಿಂದ ಬಲವರ್ಧಿತವಾದ ಕಾಂಕ್ರೀಟ್ ಕಟ್ಟಡ ಸಂಪೂರ್ಣ ಸಿದ್ಧಗೊಂಡಂತೆ ಆಗುತ್ತದೆ. ಈ ಅಲ್ಯುಮಿನಿಯಂ ಫಲಕಗಳನ್ನು ಕನಿಷ್ಠ 250 ಬಾರಿ ಮರುಬಳಕೆ ಮಾಡಬಹುದು. ಇದರಿಂದ ಕಟ್ಟಡ ನಿರ್ಮಾಣ ತಾಣದಲ್ಲಿ ಉತ್ಪಾದನೆಗೊಳ್ಳುವ ತ್ಯಾಜ್ಯದ ಪ್ರಮಾಣ ಕೂಡ ಕಡಿಮೆಯಾಗುತ್ತದೆ.


ಹೀಗೆ ನಿರ್ಮಾಣಗೊಳ್ಳುವ ಕಟ್ಟಡವು ನಿಖರವಾಗಿದ್ದು ನಾಜೂಕಾಗಿಯೂ ಇರುತ್ತದೆ. ಇದು ಅಧಿಕ ಕ್ಷಮತೆ ಹೊಂದಿದ್ದು ಮತ್ತೊಮ್ಮೆ ಪ್ಲ್ಯಾಸ್ಟರಿಂಗ್ ಅಗತ್ಯವಿರುವುದಿಲ್ಲ. ಇದರಿಂದಾಗಿ ಸಮಯ, ಶ್ರಮ ಮತ್ತು ಹಣ ಉಳಿತಾಯವಾಗುತ್ತದೆ.

ಮಿವಾನ್ ತಾಂತ್ರಿಕತೆಯು ಸಾಂಪ್ರದಾಯಿಕ ನಿರ್ಮಾಣ ವಿಧಾನಕ್ಕೆ ಹೋಲಿಸಿದರೆ ಸರಿಸುಮಾರು ಅರ್ಧದಷ್ಟು ಸಮಯವನ್ನು ಕಡಿಮೆಗೊಳಿಸುತ್ತದೆ. ಇದು ನಿಖರವಾಗಿ ಪಾಲಿಸಬೇಕಾದ ಸ್ಥಾಪಿತ ಕ್ರಮವಿಧಿಯಿಂದ ಕೂಡಿರುವುದರಿಂದ ಕುಶಲ ಕಾರ್ಮಿಕರ ಅಗತ್ಯವನ್ನೂ ತಗ್ಗಿಸುತ್ತದೆ. ಹೆಚ್ಚು ಕಾರ್ಮಿಕ ಕೆಲಸಗಳನ್ನು ಬೇಡುವ ಇಟ್ಟಿಗೆ, ಕಲ್ಲು ಮತ್ತು ರೆಂಡರಿಂಗ್ ಕೆಲಸಗಳನ್ನು ಸಂಪೂರ್ಣವಾಗಿ ನಿವಾರಿಸುತ್ತದೆ.

ಈ ತಾಂತ್ರಿಕತೆಯು ಕಟ್ಟಡಗಳಿಗೆ ಹೆಚ್ಚು ಭೂಕಂಪನ ಪ್ರತಿರೋಧ ಶಕ್ತಿಯನ್ನು ನೀಡಿ ಬಾಳಕೆ ಅವಧಿಯನ್ನು ಹೆಚ್ಚಿಸುತ್ತದೆ. ಈ ತಾಂತ್ರಿಕತೆಯಲ್ಲಿ ಜೋಡಣೆಗಳ ಸಂಖ್ಯೆ (ಜಾಯಿಂಟ್ ಗಳು) ಕಡಿಮೆ ಇರುವುದರಿಂದ ಕಟ್ಟಡಗಳಲ್ಲಿ ನೀರು ಸೋರುವಿಕೆ ಸಮಸ್ಯೆ ಕೂಡ ಉದ್ಭವಿಸುವುದಿಲ್ಲ. ಹೀಗಾಗಿ ಇಂತಹ ಕಟ್ಟಡಗಳ ನಿರ್ವಹಣೆ ಕೂಡ ಅತ್ಯಂತ ಸುಲಭ.

ಮಿವಾನ್ ನಿರ್ಮಾಣದಲ್ಲಿ ಸಮರೂಪತೆ ಇರಲಿದ್ದು ಗೋಡೆಗಳು ಮತ್ತು ಸ್ಲ್ಯಾಬ್ ಗಳು ನುಣುಪಿನ ಫಿನಿಷಿಂಗ್ (ಸ್ಮೂಥ್ ಫಿನಿಶಿಂಗ್) ಹೊಂದಿರುತ್ತದೆ. ಜೊತೆಗೆ, ಈ ತಾಂತ್ರಿಕತೆಯು ಸಾಂಪ್ರದಾಯಿಕ ತಾಂತ್ರಿಕತೆಯ ಕಟ್ಟಡಗಳಿಗಿಂತ ಹೆಚ್ಚಿನ ನೆಲ ವಿಸ್ತೀರ್ಣವನ್ನು ಒದಗಿಸಲು ಅನುವು ಮಾಡಿಕೊಡುತ್ತವೆ.

ಮಿವಾನ್ ಫಲಕ ತಾಂತ್ರಿಕತೆಯ ಉಪಯೋಗಗಳು
  • ‘3ಎಸ್’ ನಿರ್ಮಾಣ ವ್ಯವಸ್ಥೆ- ತ್ವರಿತತೆ, ಬಲ, ಸುರಕ್ಷತೆ
  • ಕಂಬ ಮತ್ತು ತೊಲೆಗಳ (ಕಾಲಂ & ಬೀಮ್) ನಿರ್ಮಾಣದ ನಿವಾರಣೆ
  • ಗೋಡೆಗಳು ಮತ್ತು ಸ್ಲ್ಯಾಬ್ ಗಳನ್ನು ಒಂದೇ ಕಾರ್ಯಾಚರಣೆಯಲ್ಲಿ ಅಳವಡಿಸಲಾಗುತ್ತದೆ.
  • ವಿಶೇಷವಾಗಿ ವಿನ್ಯಾಸಗೊಳಿಸಲಾದ, ಬಳಕೆಗೆ ಸುಲಭವಾದ ಹಗುರವಾದ ಪ್ರೀ ಎಂಜಿನಿಯರಿಂಗ್ ಅಲ್ಯುಮಿನಿಯಂ ಫಲಕಗಳು
  • ಶಟರಿಂಗ್ ಭಾಗದ ಜೋಡಿಸುವಿಕೆ ಮತ್ತು ಅಳವಡಿಸುವಿಕೆ
  • ಗೋಡೆಗಳು ಮತ್ತು ಸ್ಲ್ಯಾಬ್ ಗಳ ಕಾಂಕ್ರೀಟೀಕರಣ
ಲಾಭಗಳು
  • ಮಿವಾನ್ ಫಲಕ ತಾಂತ್ರಿಕತೆಗೆ ಕಡಿಮೆ ಕಾರ್ಮಿಕತೆ ಸಾಕಾಗುತ್ತದೆ.
  • ಸುದೀರ್ಘ ಬಾಳಿಕೆ ಅವಧಿ
  • ಹೆಚ್ಚಿನ ಭೂಕಂಪನ ಪ್ರತಿರೋಧ
  • ಕಡಿಮೆ ಜೋಡಣೆಗಳ ಸಂಖ್ಯೆ. ಹೀಗಾಗಿ ಕಡಿಮೆ ಸೋರಿಕೆ
  • ಹೆಚ್ಚಿನ ನೆಲವಿಸ್ತೀರ್ಣ ಲಭ್ಯತೆ
  • ಗೋಡೆಗಳು ಮತ್ತು ಸ್ಲ್ಯಾಬ್ ಗಳ ನುಣುಪಾದ ಅಂತಿಮಸ್ಪರ್ಶ (ಫಿನಿಷಿಂಗ್)
  • ನಿರ್ಮಾಣ ಗುಣಮಟ್ಟದಲ್ಲಿ ಸಮರೂಪತೆ
  • ನಿರ್ವಹಣೆ ಅತ್ಯಂತ ಕನಿಷ್ಠ
  • ತ್ವರಿತವಾಗಿ ಪೂರ್ಣಗೊಳಿಸಲು ಪೂರಕ

ಈಗಾಗಲೇ ಪೂರ್ಣಗೊಂಡಿರುವ ಮತ್ತು ಇದೀಗ ನಡೆಯುತ್ತಿರುವ ನಮ್ಮ ಯೋಜನಾ ಕಾಮಗಾರಿಗಳಲ್ಲಿ ಮಿವಾನ್ ತಂತ್ರಜ್ಞಾನದ ಬಳಕೆ

ಕೆಂಗೇರಿ ಹೋಬಳಿ ವಳಗೆರಹಳ್ಳಿ ಗ್ರಾಮ 2ನೇ & 4ನೇ ಹಂತದಲ್ಲಿ ಸುಲಭ ದರದ ಮನೆಗಳ ನಿರ್ಮಾಣ.
ಗ್ರಾಹಕ:
ಬಿಡಿಎ
ಮನೆಗಳ ಸಂಖ್ಯೆ:
752
ಕಾಮಗಾರಿ ಸ್ಥಿತಿ:
ಪೂರ್ಣಗೊಂಡಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ಕಣಮಿಣಿಕೆ ಗ್ರಾಮದ ಸರ್ವೆ ನಂಬರ್ 95ರಲ್ಲಿ ಟೆಂಡರುದಾರರ ಟು-ಕವರ್ ಸಿಸ್ಟಮ್ ವಿನ್ಯಾಸದ ಪ್ರಕಾರ ಮುಚ್ಚಿದ (2ನೇ ಹಂತ) & (3ನೇ ಹಂತ) ಟರ್ನ್ ಕೀ (ಟರ್ನ್ ಕೀ= ಯೋಜನೆ ಆರಂಭದಿಂದ ಮುಗಿಯುವ ತನಕ ಸಂಪೂರ್ಣ ಗುತ್ತಿಗೆ) ಮಾದರಿಯಲ್ಲಿ 2 ಬಿಎಚ್ ಕೆ ವಸತಿ ಯೋಜನೆ ನಿರ್ಮಾಣ.
ಗ್ರಾಹಕ:
ಬಿಡಿಎ
ಮನೆಗಳ ಸಂಖ್ಯೆ:
960
ಯೋಜನೆಯ ಸ್ಥಿತಿ:
ಪೂರ್ಣಗೊಂಡಿದೆ.
ಕೆಂಗೇರಿ ಹೋಬಳಿ ಕೊಮ್ಮಘಟ್ಟ ಗ್ರಾಮದ ಸರ್ವೆ ನಂಬರ್ 30ರಲ್ಲಿ ಟೆಂಡರುದಾರರ ಯೋಜನೆ ಮತ್ತು ಟು-ಕವರ್ ಸಿಸ್ಟಮ್ ವಿನ್ಯಾಸದ ಪ್ರಕಾರ ಮುಚ್ಚಿದ (1ನೇ ಹಂತ) ಟರ್ನ್ ಕೀ ಬೇಸಿಸ್ ಮಾದರಿಯಲ್ಲಿ 2 ಬಿಎಚ್ ಕೆ ವಸತಿ ಯೋಜನೆ ನಿರ್ಮಾಣ.
ಗ್ರಾಹಕ:
ಬಿಡಿಎ
ಮನೆಗಳ ಸಂಖ್ಯೆ:
216
ಯೋಜನೆಯ ಸ್ಥಿತಿ:
ಪೂರ್ಣಗೊಂಡಿದೆ.
ಕೆಂಗೇರಿ ಹೋಬಳಿ ಕೊಮ್ಮಘಟ್ಟ ಗ್ರಾಮದ ಸರ್ವೆ ನಂಬರ್ 30ರಲ್ಲಿ ಟೆಂಡರುದಾರರ ಯೋಜನೆ ಮತ್ತು ಟು-ಕವರ್ ಸಿಸ್ಟಮ್ ವಿನ್ಯಾಸದ ಪ್ರಕಾರ ಮುಚ್ಚಿದ (2ನೇ ಹಂತ) ಟರ್ನ್ ಕೀ ಮಾದರಿಯಲ್ಲಿ 2 ಬಿಎಚ್ ಕೆ ವಸತಿ ಯೋಜನೆ ನಿರ್ಮಾಣ.
ಗ್ರಾಹಕ:
ಬಿಡಿಎ
ಮನೆಗಳ ಸಂಖ್ಯೆ:
320
ಯೋಜನೆಯ ಸ್ಥಿತಿ:
ಪೂರ್ಣಗೊಂಡಿದೆ.
ಕೊಮ್ಮಘಟ್ಟ ಗ್ರಾಮದ ಸರ್ವೆ ನಂಬರ್ 115/1ರಲ್ಲಿ ಟೆಂಡರುದಾರರ ಯೋಜನೆ ಮತ್ತು ಟು-ಕವರ್ ಸಿಸ್ಟಮ್ ವಿನ್ಯಾಸದ ಪ್ರಕಾರ ಮುಚ್ಚಿದ (3ನೇ ಹಂತ) ಟರ್ನ್ ಕೀ ಮಾದರಿಯಲ್ಲಿ ನಾಡಪ್ರಭು ಕೆಂಪೇಗೌಡ ಬಡಾವಣೆ ಯೋಜನೆಯಲ್ಲಿ 2 ಬಿಎಚ್ ಕೆ ವಸತಿ ಯೋಜನೆ ನಿರ್ಮಾಣ.
ಗ್ರಾಹಕ:
ಬಿಡಿಎ
ಮನೆಗಳ ಸಂಖ್ಯೆ:
336
ಯೋಜನೆಯ ಸ್ಥಿತಿ:
ಕಾಮಗಾರಿ ನಡೆಯುತ್ತಿದೆ.
ಬೆಂಗಳೂರು ದಕ್ಷಿಣ ತಾಲ್ಲೂಕು ಕೆಂಗೇರಿ ಹೋಬಳಿ ವಳಗೆರಹಳ್ಳಿಯ ಸರ್ವೆ ನಂಬರ್ 70, 101/3 & 102/2ರಲ್ಲಿ ಜ್ಞಾನಭಾರತಿ ಬಡಾವಣೆ ಯೋಜನೆಯಡಿ ಟರ್ನ್ ಕೀ ಗುತ್ತಿಗೆ ಮಾದರಿಯಲ್ಲಿ ಟೆಂಡರುದಾರರ ಯೋಜನೆ ಮತ್ತು ವಿನ್ಯಾಸದ ಪ್ರಕಾರ ಮುಚ್ಚಿದ ದ್ವಿ ಲಕೋಟೆ ಪದ್ಧತಿಯಡಿ (ಟು-ಕವರ್ ಸಿಸ್ಟಮ್) 2 ಬಿಎಚ್ ಕೆ ವಸತಿ ಯೋಜನೆ ನಿರ್ಮಾಣ.
ಗ್ರಾಹಕ:
ಬಿಡಿಎ
ಮನೆಗಳ ಸಂಖ್ಯೆ:
360
ಯೋಜನೆಯ ಸ್ಥಿತಿ:
ಕಾಮಗಾರಿ ನಡೆಯುತ್ತಿದೆ.
ಗುರ್ಗಾಂವ್ ಗ್ರೂಪ್ ಸೆಂಟರ್, ಕದರ್ ಪುರದಲ್ಲಿ ಕುಟುಂಬ ವಸತಿ ಸಮುಚ್ಚಯದಲ್ಲಿ 749 ಮನೆಗಳ ಹಾಗೂ ತಲಾ 240 ಜನರ 3 ಬ್ಯಾರಕ್ ಗಳ ನಿರ್ಮಾಣ. ಇದು ಡಬ್ಲ್ಯು/ಎಸ್, ಎಸ್/ಐ. ಒಳಭಾಗದ ವಿದ್ಯುತ್ ವ್ಯವಸ್ಥೆ ಅಳವಡಿಕೆ, ಅಗ್ನಿ ಪ್ರತಿರೋಧ ವ್ಯವಸ್ಥೆ, ಜನರು/ ಸಾಮಾನು ಸರಂಜಾಮು ಸಾಗಣೆಗೆ ಲಿಫ್ಟ್ ಗಳ ಅಳವಡಿಕೆ ಮತ್ತಿತರ ಇ & ಎಂ ಸೇವಾ ಸವಲತ್ತುಗಳನ್ನು ಒಳಗೊಂಡಿರುತ್ತದೆ.
ಗ್ರಾಹಕರು:
ಸಿಆರ್ ಪಿಎಫ್- ಸಿಪಿಡಬ್ಲ್ಯುಡಿ
ಯೋಜನೆಯ ಸ್ಥಿತಿ:
ಕಾಮಗಾರಿ ನಡೆಯುತ್ತಿದೆ

ಮಿವಾನ್ ಶಟರಿಂಗ್- ಹೊಂಬಾಳೆ ಕನ್ಸಟ್ರಕ್ಷನ್ಸ್ ನಿರ್ಮಾಣ ಯೋಜನೆಯ ಚಿತ್ರಗಳು @ ವಳಗೆರಹಳ್ಳಿ, 2 ಮತ್ತು 4ನೇ ಹಂತ. ನೆಲಮಟ್ಟದ ಕೆಲಸದಿಂದ ಮೊದಲುಗೊಂಡು ಕಾಮಗಾರಿಯ ವಿವಿಧ ಹಂತಗಳು.

ಒಳಾಂಗಣ ಫಿನಿಷಿಂಗ್ ಚಿತ್ರಗಳು

ಮಿವಾನ್ ಫಲಕ (ಫಾರ್ಮ್ ವರ್ಕ್ಸ್) ತಾಂತ್ರಿಕತೆಯಲ್ಲಿ ಕಾಮಗಾರಿಯ ಹಂತಗಳು

ಕ್ರಮ ಸಂಖ್ಯೆ ಕಾಮಗಾರಿಯ ಹಂತಗಳು ದಿನಗಳು
1 ಫಲಕಗಳನ್ನು ಕೂರಿಸಲು ಮತ್ತು ಬಲವರ್ಧನೆಗಾಗಿ ಮೇಲ್ಮ್ಮೈಗಳನ್ನು ಗುರುತಿಸುವುದು 1ನೇ ದಿನ
2 ಲಂಬ ಬಲವರ್ಧನೆ ಕೆಲಸ 2ನೇ ದಿನ
3 ಲಂಬ ಮತ್ತು ಸಮತಲ ಫಲಕಗಳ ಕೂರಿಸುವಿಕೆ ಮತ್ತು ಎಲ್ಲಾ ಪರಿಕರಗಳೊಂದಿಗೆ ಸೂಕ್ತ ಜಾಗದಲ್ಲಿ ಅಳವಡಿಸುವಿಕೆ 3ನೇ ದಿನ
4 ಗೋಡೆಗಳು, ಸಜ್ಜಾ, ಲಾಫ್ಟ್ ಗಳು, ಟಾಪ್ ಸ್ಲ್ಯಾಬ್ ಗಳು ಮತ್ತು ಹುದುಗಿಸಿದ ಭಾಗಗಳು ಸೇರಿ ಎಲ್ಲಾ ಘಟಕಗಳ ಕಾಂಕ್ರೀಟ್ ಕೆಲಸ 4ನೇ ದಿನ
5 16 ಗಂಟೆಗಳ ಕಾಲ ಸತತ ಕ್ಯೂರಿಂಗ್ ನಂತರ ಗೋಡೆ ಫಲಕದ (ವಾಲ್ ಪ್ಯಾನೆಲ್) ಡೀ ಶಟರಿಂಗ್ ಮತ್ತು ಕ್ಯೂಬ್ ಬಲದ ತಪಾಸಣೆ 5ನೇ ದಿನ
6 36 ಗಂಟೆಗಳ/ 3 ದಿನಗಳ ಕಾಂಕ್ರೀಟ್ ಅವಧಿಯ ನಂತರ ಸ್ಲ್ಯಾಬ್ ಪ್ಯಾನೆಲ್ ಗಳ ಡೀ ಶಟರಿಂಗ್. ತಕ್ಷಣವೇ ಸತತ ಕ್ಯೂರಿಂಗ್ ವಿಧಾನಗಳಿಂದ/ ಮೇಲ್ಮೈಗೆ ಕ್ಯೂರಿಂಗ್ ರಾಸಾಯನಿಕ ಸಂಯುಕ್ತಗಳನ್ನು ಲೇಪಿಸುವುದರಿಂದ ಸ್ಲ್ಯಾಬ್ ಗಳ ರೀ-ಪ್ರಾಪಿಂಗ್ ಕೆಲಸ 6ನೇ ದಿನ
ಶಿಷ್ಟ ಮಾನಕಗಳ ಪ್ರಕಾರ ಸತತ 28 ದಿನಗಳ ಕಾಲ ಕ್ಯೂರಿಂಗ್ ನಡೆಸಲಾಗುವುದು. ಮೇಲೆ ತಿಳಿಸಿದ ಒಂದು ವಸತಿ ಘಟಕಕ್ಕೆ ಅನ್ವಯವಾಗುವ ಕ್ರಮವನ್ನೇ ಎಲ್ಲಾ ಘಟಕಗಳಿಗೂ ಯೋಜನೆಯ ಕಾಲಮಿತಿಗೆ ಅನುಗುಣವಾಗಿ ನಡೆಸಲಾಗುವುದು.
ವಳಗೆರಹಳ್ಳಿ 6ನೇ ಹಂತ & ಕೊಮ್ಮಘಟ್ಟ 3ನೇ ಹಂತಗಳಲ್ಲಿ ಮಿವಾನ್ ಶಟರಿಂಗ್ ತಾಂತ್ರಿಕತೆಯೊಂದಿಗೆ ನಡೆಯುತ್ತಿರುವ ನಿರ್ಮಾಣ ಯೋಜನೆಗಳ ಪಕ್ಷಿನೋಟ

ಅಲ್ಯುಮಿನಿಯಂ ಶಟರಿಂಗ್ ಬಳಸಿ ಬೃಹತ್ ನಿರ್ಮಾಣ ಕುರಿತು ನಿರ್ಮಿತೀಯ ವಿನ್ಯಾಸ ಆಧಾರಿತ ವರದಿ (ಸ್ಟ್ರಕ್ಚರಲ್ ವಿನ್ಯಾಸ ಬೇಸಿಸ್ ರಿಪೋರ್ಟ್)

ಎ.1 ಭಾಗ-1 ಪ್ರಸ್ತಾವನೆ

ನಿರ್ಮಾಣ ಕಾಮಗಾರಿಗೆ ಪರ್ಯಾಯ ತಾಂತ್ರಿಕತೆ (ಅಲ್ಯುಮಿನಿಯಂ ಬಳಸಿ ಬೃಹತ್ ಸಮುಚ್ಚಯ ನಿರ್ಮಾಣ)

1. ಪ್ರಸ್ತಾವನೆ

ಅಲ್ಯುಮಿನಿಯಂ “ವಾಲ್ ಟೈಸ್ ಅಂಡ್ ಫಾರ್ಮ್ಸ್” (ಡಬ್ಲ್ಯುಟಿಎಫ್) ಶಟರಿಂಗ್ ವಿಧಾನದಲ್ಲಿ ಎಲ್ಲಾ ಸ್ಟ್ರಕ್ಚರಲ್ ಎಲಿಮೆಂಟ್ಸ್ ಗಳನ್ನು (ಕಟ್ಟಡ ಧಾತುಗಳು) ‘ಕ್ಯಾಸ್ಟ್-ಇನ್-ಸಿಟು’ ಕಾಂಕ್ರೀಟ್್ ಬಳಸಿ ಪ್ರತಿದಿನಕ್ಕೆ ಸರಾಸರಿ 2 ಮನೆಗಳ ಗುಣಾಂಕದಲ್ಲಿ ವಸತಿ ಸಮುಚ್ಚಯ ನಿರ್ಮಿಸುವುದು ಇದರ ಉದ್ದೇಶವಾಗಿದೆ. ಈ ನಿರ್ಮಾಣ ವಿಧಾನವು “ತ್ವರಿತ ನಿರ್ಮಾಣ ತಾಂತ್ರಿಕತೆ”ಗಳಲ್ಲಿ ಒಂದಾಗಿದೆ. ಈ ವಿಧಾನವು ಆವೃತ್ತಿ ಸಮಯವನ್ನು ತಗ್ಗಿಸಲು, ನಿರ್ಮಾಣ ತಾಣದಲ್ಲಿ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳಲು, ಕಡಿಮೆ ಸಾಮಗ್ರಿ ಸಂಗ್ರಹದೊಂದಿಗೆ ಹಾಗೂ ಕನಿಷ್ಠ ಕಾರ್ಮಿಕ ಶಕ್ತಿಯೊಂದಿಗೆ ಕಾರ್ಯನಿರ್ವಹಿಸಲು ಪೂರಕ. ಈ ವಿಧಾನದಲ್ಲಿ ಗೋಡೆಗಳು, ಲಿಂಟೆಲ್, ಬೀಮ್, ಸ್ಲ್ಯಾಬ್, ಸಜ್ಜಾ ಮತ್ತು ಅಡುಗೆ ಮನೆ ಪ್ಲ್ಯಾಟ್ ಫಾರ್ಮ್ ಗಳನ್ನು ಎರಕ ಹಾಕಲಾಗುತ್ತದೆ.

2. ಅಗ್ನಿ ನಿರೋಧಕ ಶ್ರೇಯಾಂಕ

ಕಟ್ಟಡದ ಎತ್ತರವು 15.0 ಮೀಟರ್ ಗಿಂತ ಹೆಚ್ಚಿಗೆ ಇರುವುದರಿಂದ ಅಗ್ನಿ ನಿರೋಧಕ ಶ್ರೇಯಾಂಕವನ್ನು 2.0 ಗಂಟೆಗಳು ಎಂದು ಸಂಶ್ಲೇಷಣೆ ಮತ್ತು ಉದ್ದೇಶಿತ ಕಟ್ಟಡದ ವಿನ್ಯಾಸದ ವೇಳೆ ಪರಿಭಾವಿಸಲಾಗುವುದು.

3.ಶಟರಿಂಗ್ ಕ್ರಮ

ವಾಸ್ತುಶಿಲ್ಪ ಮತ್ತು ನಿರ್ಮಿತೀಯ ಅಗತ್ಯಗಳಿಗೆ ಅನುಗುಣವಾಗಿ ಅಲ್ಯುಮಿನಿಯಂ ಬಳಸಿ ಫ್ಯಾಬ್ರಿಕೇಟ್ ಮಾಡಲಾದ ನಿಖರ ಎಂಜಿನಿಯರಿಂಗ್ ವಿಧಾನಕ್ಕೆ ಶಟರಿಂಗ್ ಎನ್ನಲಾಗುತ್ತದೆ. ವಾಲ್ ಟೈಸ್ ಮತ್ತು ಕ್ಲ್ಯಾಂಪ್ ಗಳ ಮೂಲಕ ಜೋಡಣೆಗೊಂಡ ಗೋಡೆ ಫಲಕಗಳನ್ನು ವಾಲ್ ಶಟರಿಂಗ್ ಗೆ ಬಳಸಲಾಗುತ್ತದೆ. ಸ್ಲ್ಯಾಬ್ ಫಲಕಗಳನ್ನು ಸ್ಲ್ಬಾಬ್ ಗಳಿಗೆ ಕಾಂಕ್ರೀಟ್ ಹಾಕಲು ಆಸರೆಯಾಗಿ ಉಪಯೋಗಿಸಿಕೊಳ್ಳಲಾಗುತ್ತದೆ. ನಿರ್ಮಿತೀಯ ಅಗತ್ಯಗಳು, ಸುಲಭವಾಗಿ ಶಟರಿಂಗ್ ತೆಗೆಯುವುದು ಮತ್ತು ಸಾಮಗ್ರಿಗಳ ನಿರ್ವಹಣೆಯನ್ನು ಗಮನದಲ್ಲಿರಿಸಿಕೊಂಡು ಪ್ರಾಪ್ಸ್ ಮೇಲೆ ಸೂಕ್ತ ಜಾಗಗಳಲ್ಲಿ ಸ್ಲ್ಯಾಬ್ ಫಲಕಗಳನ್ನು ಕೂರಿಸಲಾಗುವುದು. ಅಲ್ಯುಮಿನಿಯಂ ಹಗುರವಾದ್ದರಿಂದ ಶಟರಿಂಗ್ನ ನಿರ್ವಹಣೆ ಹಾಗೂ ಫಲಕಗಳನ್ನು ಸೂಕ್ತ ಸ್ಥಾನದಲ್ಲಿ ಇರಿಸುವುದು ಸುಲಭ. ಹೀಗಾಗಿ ಕಟ್ಟಡದ ಮೇಲ್ಮೈ ಫಿನಿಷಿಂಗ್ ಉತ್ತಮ ಗುಣಮಟ್ಟದಿಂದ ಕೂಡಿದ್ದು, ಉದ್ದ-ಅಗಲ-ಎತ್ತರಗಳು ನಿಖರವಾಗಿರುತ್ತವೆ.

4. ಶಟರಿಂಗ್ ವಿಧಾನದ ಜೋಡಣಾ ಅನುಕ್ರಮಣಿಕೆ:

ವಾಲ್ ರೀಫ್ಯಾಬ್ರಿಕೇಷನ್, ಎಲೆಕ್ಟ್ರಿಕಲ್ ಕಂಡಕ್ಟಿಂಗ್/ ಪಿಎಚ್ಇ ಕಂಡಕ್ಟಿಂಗ್ ಪೂರ್ಣಗೊಂಡ ನಂತರ ವಾಲ್ ಫಾರ್ಮ್ ಗಳನ್ನು (ಗೋಡೆ ಫಲಕಗಳನ್ನು) ಕೂರಿಸಲಾಗುತ್ತದೆ. ವಾಲ್ ಟೈಸ್ ಮತ್ತು ಕ್ಲ್ಯಾಂಪ್ ಗಳ ಮೂಲಕ ಈ ಫಲಕಗಳನ್ನು ಜೋಡಿಸಲಾಗುತ್ತದೆ. ನಂತರ ಸ್ಲ್ಯಾಬ್ ಫಲಕಗಳನ್ನು ಅಳವಡಿಸಿ ಅದಕ್ಕೆ ಅಗತ್ಯವಾದ ರೆಬರ್ ಫ್ಯಾಬ್ರಿಕೇಷನ್ ಮತ್ತು ಎಲೆಕ್ಟ್ರಿಕಲ್ ಕಂಡಕ್ಟಿಂಗ್ ಕೆಲಸ ಮಾಡಲಾಗುತ್ತದೆ. ಇದಾದ ನಂತರ ಘಟಕವು ಒಂದೇ ಸುರಿವಿನಲ್ಲಿ ಕಾಂಕ್ರೀಟ್ ಹದಗೊಳಿಸುವಿಕೆಗೆ ಸಿದ್ಧಗೊಳ್ಳುತ್ತದೆ.

5.ಕಾಂಕ್ರೀಟ್

ಕಾಂಕ್ರೀಟು ಹಾಕಲು ಮಿಶ್ರಣ ವಿನ್ಯಾಸ ಮತ್ತು ನಿರ್ಮಿತೀಯ ಅಗತ್ಯಗಳಿಗೆ ಅನುಸಾರವಾಗಿ ಸೂಕ್ತ ದರ್ಜೆಯ ಸೆಲ್ಫ್ ಕಾಂಪ್ಯಾಕ್ಟ್ ಕಾಂಕ್ರೀಟನ್ನು (ಎಸ್ ಸಿಸಿ) ಬಳಸಲಾಗುವುದು. ಎಲ್ಲೂ ಗಂಟು ಕಟ್ಟಿಕೊಳ್ಳದೆ ಸ್ವಯಂ ಸಂಕುಚಿತಗೊಳ್ಳುವುದು ಎಸ್ ಸಿಸಿಯ ಅಂತರ್ಗತ ಗುಣವಾಗಿದೆ. ಹೀಗಾಗಿ ಈ ತಾಂತ್ರಿಕತೆಗೆ ಎಸ್ ಸಿಸಿ ಹೆಚ್ಚು ಸೂಕ್ತ. ಕಾಂಕ್ರೀಟನ್ನು ಸುರಿಯುವ ಕ್ಷಣದಲ್ಲಿ ಪ್ರತಿ ಗಂಟೆಗೆ 600 ಮಿ.ಮೀ.ವರೆಗೆ ಹರಡಿಕೊಳ್ಳುವ ರೀತಿಯಲ್ಲಿ ಸಿದ್ಧಗೊಳಿಸಿಕೊಳ್ಳಲಾಗುವುದು. ಈ ಮೂಲಕ ಕಾಂಕ್ರೀಟಿನ ಸಮರ್ಪಕ ಪಸರಿಸಿಕೊಳ್ಳುವಿಕೆ ಮತ್ತು ಸಂಕುಚಿತತೆಯನ್ನು ಖಾತ್ರಿಪಡಿಸಿಕೊಳ್ಳಲಾಗುವುದು.

6.ಡೀಶಟರಿಂಗ್ (ಫಲಕಗಳನ್ನು ತೆಗೆಯುವುದು)

ನಿರ್ಮಿತೀಯ ಅಗತ್ಯಗಳಿಗೆ ಅನುಗುಣವಾಗಿ ಕಾಂಕ್ರೀಟಿಂಗ್ ಆದ 16-24 ಗಂಟೆಗಳ ನಂತರ ಗೋಡೆ ಫಲಕಗಳ ಡೀಶಟರಿಂಗ್ ಮಾಡಲಾಗುವುದು. ಸ್ಲ್ಯಾಬ್ ಫಲಕಗಳನ್ನು 3 ದಿನಗಳ ನಂತರ ತೆಗೆಯಲಾಗುವುದು. ಸ್ಲ್ಯಾಬ್ ಫಲಕಗಳನ್ನು ತೆಗೆದ ತಕ್ಷಣವೇ ಸೂಕ್ತ ಜಾಗಗಳಲ್ಲಿ ಪ್ರಾಪ್ಸ್ ಗಳ ಮರುಜೋಡಣೆ ಮಾಡಲಾಗುವುದು.

7.ಕ್ಯೂರಿಂಗ್

ಸಿಮೆಂಟಿನಲ್ಲಿರುವ ನೀರಿನ ಅಂಶ ಆವಿಯಾಗುವ ವೇಳೆ ತೇವಾಂಶ ನಷ್ಟದ ದರ ಮತ್ತು ಅದರ ಪ್ರಮಾಣವನ್ನು ನಿಯಂತ್ರಿಸುವ ಪ್ರಕ್ರಿಯೆಗೆ ಕ್ಯೂರಿಂಗ್ ಎನ್ನಲಾಗುತ್ತದೆ. ಕಾಂಕ್ರೀಟ್ ಬಲವರ್ಧನೆ ಆಗುತ್ತಿರುವ ಅವಧಿಯಲ್ಲಿ ತೇವಾಂಶ ನಷ್ಟವನ್ನು ತಡೆದು ಕಾಂಕ್ರೀಟಿನಲ್ಲಿ ಪಸೆ ಉಳಿಯುವಂತೆ ಮಾಡುವುದು ಕ್ಯೂರಿಂಗ್ ನ ಉದ್ದೇಶವಾಗಿದೆ. ಕಾಂಕ್ರೀಟ್ ಕಟ್ಟಡದ ಬಾಳಿಕೆ, ಬಲ, ನೀರು ಸೋರದಿರುವಿಕೆ, ಸವಕಳಿ ಪ್ರತಿರೋಧ, ಹೆಪ್ಪುಗಟ್ಟುವಿಕೆಗೆ ಪ್ರತಿರೋಧ ಇತ್ಯಾದಿ ಅಂಶಗಳ ಮೇಲೆ ಕ್ಯೂರಿಂಗ್ ಕೆಲಸವು ಹೆಚ್ಚಿನ ಪರಿಣಾಮ ಬೀರುತ್ತದೆ.

ಪದರಗಳ ರಚನೆಗೆ ಪೂರಕವಾದ ಕ್ಯೂರಿಂಗ್ ಕಾಂಪೌಂಡ್ ದ್ರವಗಳನ್ನು (ಬಿಎಎಸ್ಎಫ್ ಮಾಸ್ಟರ್ ಕ್ಯೂರ್-107) ನೇರವಾಗಿ ಕಾಂಕ್ರೀಟ್ ಮೇಲ್ಮೈ ಮೇಲೆ ಸುರಿಯಲಾಗುತ್ತದೆ. ನಂತರ ಇದು ಒಣಗಿ, ಗೋಡೆ ಶಟರಿಂಗ್ ತೆಗೆಯುತ್ತಿದ್ದಂತೆಯೇ ಕಾಂಕ್ರೀಟ್ ನಿಂದ ತೇವಾಂಶ ನಷ್ಟವನ್ನು ನಿರ್ಬಂಧಿಸುವ ಅಭೇದ್ಯ ಪದರವನ್ನು ಸೃಷ್ಟಿಸುತ್ತದೆ. ಈ ರಾಸಾಯನಿಕ ಸಂಯುಕ್ತವು ಮೇಣವನ್ನು ಆಧರಿಸಿ ತಯಾರಾಗಿರುತ್ತದೆ.

ಸ್ಲ್ಯಾಬ್ ಗಳನ್ನು ಪಾಂಡಿಂಗ್ ಕ್ರಮದಲ್ಲಿ ಕನಿಷ್ಠ 7 ದಿನಗಳ ಕಾಲ ಕ್ಯೂರಿಂಗ್ ಮಾಡಲಾಗುತ್ತದೆ.

8. ತಳಪಾಯ

ಮಣ್ಣಿನ ಸ್ಥಿತಿಗತಿಯನ್ನು ಆಧರಿಸಿ ಸಾಂಪ್ರದಾಯಿಕ ತಳಪಾಯ ಮಾದರಿಗಳಾದ ವಾಲ್ ಸ್ಟ್ರಿಪ್ ಪೌಂಡೇಷನ್/ ರಾಫ್ಟ್ ಫೌಂಡೇಷನ್ ಗಳನ್ನು ಬಳಸಲಾಗುತ್ತದೆ.

9.ಉಪಯೋಗಗಳು

ಈ ಕೆಳಗಿನ ಉಪಯೋಗಗಳ ಕಾರಣದಿಂದಾಗಿ ಈ ಬಗೆಯ ನಿರ್ಮಾಣ ತಾಂತ್ರಿಕತೆಯನ್ನು ಅಳವಡಿಸಿಕೊಳ್ಳಲಾಗುತ್ತದೆ;

  • ತ್ವರಿತ ಗತಿಯ ನಿರ್ಮಾಣ ತಾಂತ್ರಿಕತೆ
  • ಇಡೀ ಘಟಕ ಕಾಂಕ್ರೀಟ್ ನಿರ್ಮಿತಿ ಆಗಿರುವುದರಿಂದ ಹೆಚ್ಚಿನ ಬಲ, ಅಧಿಕ ಬಾಳಿಕೆ ಮತ್ತು ಸೌರ ಶಾಖ ಪ್ರತಿರೋಧಕ ಗುಣ ಹೊಂದಿರುತ್ತದೆ.
  • ಅಗತ್ಯಗಳಿಗೆ ತಕ್ಕಂತೆ ಫಲಕಗಳನ್ನು ಅಳವಡಿಸಹುದು
  • ತಗ್ಗುವ ಆವೃತ್ತಿ ಅವಧಿ
  • ನಿರ್ಮಾಣ ತಾಣದಲ್ಲಿ ಸಾಮಗ್ರಿಗಳ ಸಂಗ್ರಹ ಕಡಿಮೆಯಾಗುವುದರಿಂದ ಉತ್ತಮ ಗುಣಮಟ್ಟ ನಿಯಂತ್ರಣ ಸಾಧ್ಯ
  • ಕಡಿಮೆ ವೆಚ್ಚದಲ್ಲಿ ಒಳ್ಳೆಯ ಗುಣಮಟ್ಟ
  • ಪ್ಲ್ಯಾಸ್ಟರಿಂಗ್ ಸಂಪೂರ್ಣ ನಿವಾರಣೆ
  • ಕುಶಲಿಗರಲ್ಲದ ಕಾರ್ಮಿಕರು ಕೂಡ ಫಲಕಗಳನ್ನು ಅಳವಡಿಸಬಹುದು.
  • ಅಲ್ಯುಮಿನಿಯಂ ಫಲಕಗಳು ದುಬಾರಿಯಾದರೂ ಅವನ್ನು ಮರುಬಳಕೆ ಮಾಡಬಹುದಾದ್ದರಿಂದ ಅಂತಿಮವಾಗಿ ಅಗ್ಗ ಎನ್ನಿಸುತ್ತವೆ.

ಪರ್ಯಾಯ ತಾಂತ್ರಿಕತೆಯ ಈ ಮೇಲಿನ ಉಪಯೋಗಗಳ ದೃಷ್ಟಿಯಿಂದ ಈ ತಾಂತ್ರಿಕತೆಯು ಬೃಹತ್ ಸಮುಚ್ಚಯಗಳ ನಿರ್ಮಾಣಕ್ಕೆ ಹೆಚ್ಚು ಸೂಕ್ತ.

ಮೊನೊಲಿಥಿಕ್ ಕನ್ಸ್ಟ್ರಕ್ಷನ್ ವಿನ್ಯಾಸ ವಿಧಿವಿಧಾನಗಳ ಬಗ್ಗೆ:

ಈ ನಿರ್ಮಾಣದಲ್ಲಿ ಪ್ರಮುಖವಾಗಿ ಬಳಕೆಯಾಗುವ ಸಾಮಗ್ರಿ ಎಂದರೆ ಆರ್ ಸಿಸಿ. ಸಾಂಪ್ರದಾಯಿಕ ವಿಧಾನದಲ್ಲಿ ಆರ್ ಸಿಸಿ ಗೋಡೆಗಳನ್ನು ಮೊದಲು ಎರಕ ಹೊಯ್ದು, ನಂತರ ಸ್ಲ್ಯಾಬ್ ಗಳನ್ನು (ಕಲ್ಲಿನ ಹಾಸು) ಹಾಕಲಾಗುತ್ತದೆ. ಆದರೆ ಈ ತಾಂತ್ರಿಕತೆಯಲ್ಲಿ ಗೋಡೆಗಳು ಮತ್ತು ಸ್ಲ್ಯಾಬ್ ಗಳನ್ನು ಒಂದೇ ಸಮಯದಲ್ಲಿ ಎರಕ ಹಾಕಲಾಗುತ್ತದೆ. ಗೋಡೆಗಳನ್ನು ‘ಲಿಮಿಟ್ ಸ್ಟೇಟ್’ ವಿಧಾನ ಬಳಸಿ ಐಎಸ್ಐ13290 ಮತ್ತು ಐಎಸ್ 456ರ ಶಿಷ್ಟ ವಿನ್ಯಾಸ ಸೂತ್ರಗಳಿಗೆ ಅನುಗುಣವಾಗಿ ಶಿಯರ್ ವಾಲ್ ಗಳಂತೆ ವಿನ್ಯಾಸಗೊಳಿಸಲಾಗುತ್ತದೆ. ಸ್ಲ್ಯಾಬ್ಗಳನ್ನು ಐಎಸ್ 456ಕ್ಕೆ ಅನುಗುಣವಾಗಿ ವಿನ್ಯಾಸಗೊಳಿಸಲಾಗುತ್ತದೆ. ಅಗ್ನಿ ನಿರೋಧಕ ಶ್ರೇಯಾಂಕ ಮತ್ತು ನಿರ್ಮಿತೀಯ ಅಗತ್ಯಗಳನ್ನು ಆಧರಿಸಿ ಗೋಡೆಗಳು, ಸ್ಲ್ಯಾಬ್ ಗಳು ಮತ್ತು ತೊಲೆಗಳ ದಪ್ಪ ಎಷ್ಟಿರಬೇಕೆಂಬುದನ್ನು ನಿಗದಿಗೊಳಿಸಲಾಗುತ್ತದೆ. ವಸತಿ ಘಟಕಗಳ ಗೋಡೆ, ಸ್ಲ್ಯಾಬ್, ತೊಲೆ ಇತ್ಯಾದಿಗಳ ನಿರ್ಮಿತೀಯ ವಿನ್ಯಾಸಕ್ಕೆ ‘ಲಿಮಿಟ್ ಸ್ಟೇಟ್ ಆಫ್ ಸ್ಟ್ರೆಂಥ್’ಅನ್ನು ಬಳಸಲಾಗುತ್ತದೆ. ಬಾಳಿಕೆ ಅಂಶವನ್ನು ಹೆಚ್ಚಿಸುವ ಸಲುವಾಗಿ ಸ್ಥಿರತೆ, ಬಿರುಕು ಬಿಡುವಿಕೆ ಮತ್ತು “ಡಿಫ್ಲೆಕ್ಷನ್ ಗಳ (ವಿಚಲತೆ) ಲಿಮಿಟ್ ಸ್ಟೇಟ್” ನ್ನು ಅನುಸರಿಸಲಾಗುತ್ತದೆ.

ಉದ್ದೇಶಿತ ಕಾಮಗಾರಿಯಲ್ಲಿ ಆರ್ ಸಿಸಿ ಬಳಸುವ ಉದ್ದೇಶವಿದೆ. ನಿರ್ಮಿತಿ ವಿನ್ಯಾಸಕ್ಕಾಗಿ ಐಎಸ್ 456, ಐಎಸ್ 13290, ಐಎಸ್ 1893, ಐಎಸ್ 875 ರಲ್ಲಿ ಅಡಕಗೊಳಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಲಾಗುತ್ತದೆ. ಭಾರತೀಯ ಮಾನಕ ಮಾರ್ಗದರ್ಶಿ ಸೂತ್ರಗಳು ಮತ್ತು ಪರಿಪಾಠಗಳಿಗೆ ತಕ್ಕಂತೆ ಕಾಂಕ್ರೀಟ್ (ಪೋರ್ಟ್ ಲ್ಯಾಂಡ್ ಸಿಮೆಂಟ್+ 30% (ಗರಿಷ್ಠ) ಜಿಜಿಬಿಎಸ್) ಮತ್ತು ಕಾಂಕ್ರೀಟ್ ಹಾಕುವ ವಿಧಾನಗಳನ್ನು ಅನುಸರಿಸಲಾಗುತ್ತದೆ. ಜಿಜಿಬಿಎಸ್/ ಫ್ಲ್ಯಾಷ್ ಬಳಕೆಯು ಸೂಕ್ಷ್ಮಾತಿಸೂಕ್ಷ್ಮ ಬಿರುಕುಗಳನ್ನು ತಗ್ಗಿಸಿ ಕಾಂಕ್ರೀಟ್ ಬಾಳಿಕೆಯನ್ನು ಹೆಚ್ಚಿಸುತ್ತದೆ. ಹೀಗಾಗಿ ನಿರ್ಮಾಣಗೊಳ್ಳುವ ಕಟ್ಟಡವು ಮನುಷ್ಯರ ಬಳಕೆಗೆ ಅತ್ಯಂತ ಸೂಕ್ತವಾಗಿರುತ್ತದೆ.

ಸಾಫ್ಟ್ ವೇರ್ ಬಳಕೆ

ಉದ್ದೇಶಿತ ನಿರ್ಮಿತಿಯ ವಿಶ್ಲೇಷಣೆ ಮತ್ತು ವಿನ್ಯಾಸಕ್ಕಾಗಿ ಮೆಸರ್ಸ್ ಕ್ರೇನ್ಸ್ ಸಾಫ್ಟ್ ವೇರ್ ಇಂಟರ್ ನ್ಯಾಷನಲ್ ಅಭಿವೃದ್ಧಿಪಡಿಸಿದ ‘ನಿಸಾ’ (ಎನ್ಐಎಸ್ಎ- ನ್ಯೂಮರಿಕಲಿ ಇಂಟೆಗ್ರೇಟೆಡ್ ಎಲಿಮೆಂಟ್ಸ್ ಫಾರ್ ಸಿಸ್ಟಮ್ ಅನಾಲಿಸಿಸ್)/ ಸಿವಿಲ್ ಅಥವಾ ‘ಇಟ್ಯಾಬ್ಸ್’ (ಇಟಿಎಬಿಎಸ್) ಸಾಫ್ಟ್ ವೇರ್ ಬಳಸಲಾಗುತ್ತದೆ.

ಭಾರತೀಯ ಪರಿಸರ ಸ್ನೇಹಿ ಕಟ್ಟಡ ಮಂಡಳಿಯ ಅಗತ್ಯಗಳ ಬಗ್ಗೆ:

ಯೋಜನೆ, ವಿನ್ಯಾಸ ಮತ್ತು ನಿರ್ಮಾಣ ಹಂತಗಳಲ್ಲಿ ಭಾರತದಲ್ಲಿ ಪ್ರಚಲಿತದಲ್ಲಿರುವ ಅತ್ಯುತ್ಕೃಷ್ಠ ವಿಧಿವಿಧಾನಗಳನ್ನು ಅನುಸರಿಸಲಾಗುತ್ತದೆ.

10. ಸುಸ್ಥಿರ ವಾಸ್ತುಶಿಲ್ಪ ಮತ್ತು ವಿನ್ಯಾಸ

ನಿವೇಶನ ತಾಣದ ಗುಣಲಕ್ಷಣಗಳಿಗೆ ಯಾವುದೇ ಧಕ್ಕೆಯಾಗದಂತೆ ಇಂಧನ ಮಿತಬಳಕೆಯನ್ನು (ಸೌರಶಕ್ತಿ ಮತ್ತು ನೈಸರ್ಗಿಕ ಬೆಳಕಿನ ಗರಿಷ್ಠ ಉಪಯೋಗ) ಗಮನದಲ್ಲಿರಿಸಿಕೊಂಡು ಕಟ್ಟಡದ ಅಭಿಮುಖತೆಯನ್ನು (ಓರಿಯಂಟೇಷನ್ ಆಫ್ ದಿ ಬಿಲ್ಡಿಂಗ್) ನಿರ್ಧರಿಸಲಾಗುವುದು.

11. ನಿರ್ಮಾಣ ತಾಣದ ಆಯ್ಕೆ ಮತ್ತು ಯೋಜನೆ

ನಿರ್ಮಾಣ ತಾಣ ಆಯ್ಕೆ ಮತ್ತು ಯೋಜನೆ ರೂಪುರೇಷೆ ಸಿದ್ಧಪಡಿಸುವ ಮುನ್ನ ಮೂಲಸೌಕರ್ಯ ಸಾಮಗ್ರಿಗಳ ಸಾಗಣೆಗೆ ಮತ್ತು ಸಾರ್ವಜನಿಕ ಸಾರಿಗೆ ಜಾಲದ ಸಂಪರ್ಕ ಅನುಕೂಲತೆಗಳನ್ನು ಗಮನದಲ್ಲಿರಿಸಿಕೊಳ್ಳಲಾಗುವುದು. ಉದ್ದೇಶಿತ ನಿರ್ಮಾಣ ತಾಣವು ಸಾರ್ವಜನಿಕ ಸಾರಿಗೆ ಜಾಲದೊಂದಿಗೆ ಉತ್ತಮ ಸಂಪರ್ಕ ಹೊಂದಿದೆ.

12. ನೀರಿನ ಮಿತಬಳಕೆ

ನೀರಿಗೆ ಕೊರತೆ ಉಂಟಾಗುವ ದಿನಗಳಲ್ಲಿ ಅದನ್ನು ನೀಗಲು ಅನುಕೂಲವಾಗುವಂತೆ ಹಾಗೂ ಮಳೆ ದಿನಗಳಲ್ಲಿ ನೀರಿನ ಮೂಲಕ್ಕೆ ಅಂತರ್ಜಲ ಮರುಪೂರಣವಾಗುವಂತೆ ಮಳೆ ನೀರು ಕೊಯ್ಲು ವ್ಯವಸ್ಥೆ ಅಳವಡಿಸಲಾಗುವುದು.

ದಕ್ಷ ಪ್ಲಂಬಿಂಗ್ ವ್ಯವಸ್ಥೆ ಅಳವಡಿಸುವ ಜೊತೆಗೆ ಸಂಸ್ಕರಿತ ನೀರು ಮತ್ತು ಕುಡಿಯುವ ನೀರಿಗೆ ಪ್ರತ್ಯೇಕ ಕೊಳವೆಗಳನ್ನು ಹಾಕಲಾಗುವುದು.

ನೀರಿನ ಬಳಕೆ: ಕ್ಯೂರಿಂಗ್ ಗೆ ಪೂರಕವಾದ ರಾಸಾಯನಿಕ ಸಂಯುಕ್ತಗಳನ್ನು ಬಳಸುವುದರಿಂದ ನಿರ್ಮಾಣ ಸಂದರ್ಭದಲ್ಲಿ ಕ್ಯೂರಿಂಗ್ ಗೆ ನೀರನ್ನು ಕನಿಷ್ಠ ಪ್ರಮಾಣದಲ್ಲಿ ಬಳಸಲಾಗುವುದು.

13.ಇಂಧನ ಕ್ಷಮತೆ

ಯಾಂತ್ರೀಕೃತ ತಂಪುಕಾರಕ ಮತ್ತು ಶಾಖ ವ್ಯವಸ್ಥೆಗಳನ್ನು ತಗ್ಗಿಸಲು ಅಥವಾ ಸಂಪೂರ್ಣ ನಿವಾರಿಸಲು ಪೂರಕವಾಗುವಂತೆ ಹಾಗೂ ಹಗಲು ವೇಳೆಯಲ್ಲಿ ವಿದ್ಯುತ್ ದೀಪಗಳ ಬಳಕೆ ತಪ್ಪಿಸುವುದನ್ನು ಗಮನದಲ್ಲಿರಿಸಿಕೊಂಡು ಸೋಲಾರ್ ಪ್ಯಾಸೀವ್ ಕಟ್ಟಡ ವಿನ್ಯಾಸ ಪರಿಕಲ್ಪನೆಯನ್ನು ಅನುಸರಿಸಲಾಗುವುದು. ಕಟ್ಟಡದ ಸೂಕ್ತ ಯೋಜನೆ,

ಅದರ ಅಭಿಮುಖತೆ (ಓರಿಯಂಟೇಷನ್), ಕಿಟಕಿ, ಬಾಗಿಲು ಮತ್ತು ವಿಂಡೋ ಷೇಡ್್ಗಳನ್ನು ಅಳವಡಿಸುವ ಜಾಗಗಳನ್ನು ಸಮರ್ಪಕವಾಗಿ ನಿರ್ಧರಿಸುವ ಮೂಲಕ ಇಂಧನ ಕ್ಷಮತೆ ಸಾಧಿಸಲು ಸಾಧ್ಯವಾಗುತ್ತದೆ.

14. ನಿರ್ಮಾಣ ಸಾಮಗ್ರಿ ಮತ್ತು ಸಂಪನ್ಮೂಲಗಳು
  • ಕಾಂಕ್ರೀಟ್ ನಿರ್ಮಾಣದಲ್ಲಿ 30% ಜಿಜಿಬಿಎಸ್/ ಫ್ಲ್ಯಾಶ್ ಬಳಸಲಾಗುವುದು. ಕಾಂಕ್ರೀಟ್ ನಲ್ಲಿ ಜಿಜಿಬಿಎಸ್/ ಫ್ಲ್ಯಾಷ್ ಬಳಸುವುದರ ಅನುಕೂಲತೆಗಳು ಈ ಕೆಳಕಂಡಂತಿವೆ.
    1. ಕಾಂಕ್ರೀಟಿನ ತಲಾ ಘಟಕದಲ್ಲಿ ಅಡಕಗೊಂಡ ಶಕ್ತಿಯು ಇಳಿಮುಖಗೊಳ್ಳುತ್ತದೆ
    2. ಜಿಜಿಬಿಎಸ್ ಬಳಕೆಯು ಕಾಂಕ್ರೀಟಿನ ಉಪಯೋಗ ಸಾಧ್ಯತೆಗಳನ್ನು ಹೆಚ್ಚು ಮಾಡುತ್ತದೆ.
    3. ಜಿಜಿಬಿಎಸ್/ಫ್ಲ್ಯಾಷ್ ಬಳಕೆಯು ಉಕ್ಕು ತುಕ್ಕು ಹಿಡಿಯದಂತೆ ಸಂರಕ್ಷಣೆ ಒದಗಿಸುತ್ತದೆ.
  • ಕಿಟಕಿಗಳಿಗೆ ಯುಪಿವಿಸಿ ಬಳಕೆ. ಹೀಗಾಗಿ ಮರದ ಬಳಕೆ ತಗ್ಗುತ್ತದೆ.
  • ಸೆರಾಮಿಕ್/ ವಿಟ್ರಿಫೈಡ್ ನೆಲಹಾಸು. ಇದರಿಂದಾಗಿ ಸಂಸ್ಕರಿತ ಗಾಜಿನ ರೂಪದಲ್ಲಿ ಶೇ 100ರಷ್ಟು ಸಂಸ್ಕರಿತ ಸಾಮಗ್ರಿ ಬಳಸಿದಂತೆ ಆಗುತ್ತದೆ.
  • ಅಲ್ಯುಮಿನಿಯಂ ಶಟರಿಂಗ್ ನ್ನು ಹೆಚ್ಚು ಸಲ ಬಳಕೆ ಮಾಡಬುದು. ಇದು ಶಟರ್ ಆಗಿ ಪ್ಲೈವುಡ್ ಬಳಕೆಗೆ ಕಡಿವಾಣ ಹಾಕುತ್ತದೆ. ಸೂಕ್ತವಾಗಿ ಕೃತಕ ಬೆಳಕಿನ ವ್ಯವಸ್ಥೆ ಮಾಡುವ ಮೂಲಕ ಮತ್ತು ಅವುಗಳನ್ನು ಸೂಕ್ತ ಜಾಗದಲ್ಲಿ ಇರಿಸುವ ಮೂಲಕ ವಿದ್ಯುತ್ ಶಕ್ತಿ ಬೇಡಿಕೆಯನ್ನು ತಗ್ಗಿಸಲಾಗುವುದು.
ಅನುಸರಣಾ ಕ್ರಮದ ಸಂಹಿತೆ

ಸಾಮಾನ್ಯವಾಗಿ ಅನ್ವಯವಾಗುವ ಸಂಹಿತೆಗಳ ಪಟ್ಟಿ ಈ ಕೆಳಕಂಡಂತಿದೆ:

ಕ್ರಮ ಸಂಖ್ಯೆ ಸಂಹಿತೆ ಶೀರ್ಷಿಕೆ
1 IS 456 ಸಾದಾ ಮತ್ತು ಬಲವರ್ಧಿತ ಕಾಂಕ್ರೀಟ್- ಕ್ರಮವಿಧಿಯ ಕೋಡ್ ಗಳು (ಅನುಸರಣಾ ನಿಯಮಗಳು)
2 IS : 875 (ಭಾಗ 1) ಕಟ್ಟಡಗಳು ಮತ್ತು ನಿರ್ಮಿತಿಗಳಿಗೆ ಗರಿಷ್ಠ ಭಾರ ತಾಳಿಕೆ ಸಾಮರ್ಥ್ಯದ (ಡಿಜೈನ್ ಲೋಡ್) ನಿಗದಿಗಾಗಿ ಕ್ರಮವಿಧಿಯ ಕೋಡ್ (ಅನುಸರಣಾ ನಿಯಮ) (ಭೂಕಂಪನ ಹೊರತುಪಡಿಸಿ) ಭಾಗ 1 ಡೆಡ್ ಲೋಡ್ (ಆಂತರ್ಯ ಭಾರ)- ಕಟ್ಟಡ ಸಾಮಗ್ರಿ ಮತ್ತು ದಾಸ್ತಾನು ಸಾಮಗ್ರಿಗಳ ಯುನಿಟ್ ಭಾರಗಳು (ಐಎಸ್ 1911: 1967ರ ಅಳವಡಿಕೆ))
3 IS : 875 (ಭಾಗ 2) ಕಟ್ಟಡ ಮತ್ತು ನಿರ್ಮಿತಿಗಳ ಡಿಜೈನ್ ಲೋಡ್ (ಗರಿಷ್ಠ ಭಾರ ತಾಳಿಕೆ) ನಿಗದಿಗಾಗಿ ಕ್ರಮವಿಧಿಯ ಕೋಡ್ (ಅನುಸರಣಾ ನಿಯಮ) (ಭೂಕಂಪನ ಹೊರತುಪಡಿಸಿ): ಭಾಗ 2 ಬಾಹ್ಯ ಭಾರಗಳು (ಇಂಪೋಸ್ಡ್ ಲೋಡ್)
4 IS : 875 (ಭಾಗ 3) ಕಟ್ಟಡ ಮತ್ತು ನಿರ್ಮಿತಿಗಳ ಡಿಜೈನ್ ಲೋಡ್ (ಗರಿಷ್ಠ ಭಾರ ತಾಳಿಕೆ) ನಿಗದಿಗಾಗಿ ಕ್ರಮವಿಧಿಯ ಕೋಡ್ (ಅನುಸರಣಾ ನಿಯಮ) (ಭೂಕಂಪನ ಹೊರತುಪಡಿಸಿ): ಭಾಗ 3 ಗಾಳಿಯ ಭಾರಗಳು (ವಿಂಡ್ ಲೋಡ್ ಗಳು)
5 IS 1893 ನಿರ್ಮಿತಿಗಳ ಭೂಕಂಪನ ಪ್ರತಿರೋಧ ವಿನ್ಯಾಸಕ್ಕಾಗಿ ಮಾನದಂಡಗಳು- ಭಾಗ 1: ಸಾಮಾನ್ಯ ನಿಬಂಧನೆಗಳು ಮತ್ತು ಕಟ್ಟಡಗಳು
6 SP 16 ಐಎಸ್ 456: 1978ರ ಅನುಸಾರ ಬಲವರ್ಧಿತ ಕಾಂಕ್ರೀಟ್ ಗಾಗಿ ವಿನ್ಯಾಸ ಕ್ರಮಗಳು
7 SP 34 ಕಾಂಕ್ರೀಟ್ ಬಲವರ್ಧನೆ ಮತ್ತು ಸೂಕ್ಷ್ಮ ಸಂಗತಿಗಳ ಕುರಿತು ಕೈಪಿಡಿ
8 IS 13920 ಭೂಕಂಪನ ಬಲಗಳಿಗೆ ಒಳಪಡುವ ಬಲವರ್ಧಿತ ಕಾಂಕ್ರೀಟ್ ನಿರ್ಮಿತಿಗಳ ಬಾಗುವಿಕೆ ವಿವರಗಳು

ಸಿ.1.ಭಾಗ-2 ಸಂಶ್ಲೇಷಣಾ ಮಾನದಂಡಗಳ ವಿವರ

ಸ್ಟ್ರಕ್ಚರಲ್ ಲೇಔಟ್ (ನಿರ್ಮಿತೀಯ ವಿನ್ಯಾಸ)

ಕಟ್ಟಡ ರಾಫ್ಟ್+ ಮಹಡಿಗಳು ಅಥವಾ ಗ್ರೌಂಡ್+ ಮಹಡಿಗಳು ಅನ್ವಯ. ಸಾಮಾನ್ಯವಾಗಿ ಫ್ಲೋರ್ ಎತ್ತರವನ್ನು 3.0 ಮೀಟರ್ ಎಂದು ಪರಿಗಣಿಸಲಾಗುತ್ತದೆ. ಲೇಔಟ್ ಅಳತೆಗಳನ್ನು ವಾಸ್ತುಶಿಲ್ಪ ಡ್ರಾಯಿಂಗ್ ಗಳಿಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.

ಸಾಮಗ್ರಿ ಗುಣಸ್ವಭಾವಗಳು

ಸಂಶ್ಲೇಷಣೆ ಮತ್ತು ವಿನ್ಯಾಸದಲ್ಲಿ ಈ ಕೆಳಗಿನ ಗುಣಸ್ವಭಾವಗಳನ್ನು ಬಳಸಲಾಗುತ್ತದೆ.

ಕಾಂಕ್ರೀಟಿನ ಗ್ರೇಡ್ ಎಂ25& ಎಂ30
ಬಲವರ್ಧಿತ ಸ್ಟೀಲ್ ನ ಗ್ರೇಡ್ ಎಫ್ಇ-500 & ಎಫ್ಇ- 500ಡಿ
ಕಾಂಕ್ರೀಟಿನ ಸಾಂದ್ರತೆ 2500 ಕಿ.ಲೋ/ಕ್ಯೂಬಿಕ್ ಮೀಟರ್
ವಿಷಕಾರಕಗಳ ಪ್ರಮಾಣ 0.2
ಯಂಗ್ಸ್ ಮಾಡ್ಯುಲಸ್ 27386 N/mm2
ಕಟ್ಟಡದ ಧಾತುಗಳ (ಸ್ಟಕ್ಚರಲ್ ಎಲಿಮೆಂಟ್ಸ್) ಅಳತೆಗಳು
ಆರ್ ಸಿಸಿ ಗೋಡೆಗಳು ಕನಿಷ್ಠ 160 ಮಿ.ಮೀ.
ರೂಫ್ ಸ್ಲ್ಯಾಬ್ ಗಳು ಕನಿಷ್ಠ 125 ಮಿ.ಮೀ. (ವಿನ್ಯಾಸಕ್ಕೆ ಅನುಗುಣವಾಗಿ ಬದಲಾವಣೆ)
ಶೌಚಾಲಯದ ಸ್ಲ್ಯಾಬ್ ಗಳನ್ನು 400 ಮೀ.ಮೀ. ಆಳಕ್ಕೆ ಹುಗಿಯಲಾಗುತ್ತದೆ. (ಇಂಡಿಯನ್ ಡಬ್ಲ್ಯು/ಸಿ) ಮತ್ತು 200 ಮಿ.ಮೀ.(ಇಡಬ್ಲ್ಯುಸಿ) 0.2
ತಳಪಾಯ

ಆರ್ ಸಿ ವಾಲ್ ಗಳಿಗೆ ಸ್ಟ್ರಿಪ್ ಫೂಟಿಂಗ್ಸ್/ ರಾಫ್ಟ್ ಫೂಟಿಂಗ್ಸ್ ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಮಣ್ಣು ಪರೀಕ್ಷೆಯ ಫಲಿತಾಂಶಗಳಿಗೆ ಅನುಗುಣವಾಗಿ ಅಡಿಪಾಯ ವಿನ್ಯಾಸಕ್ಕೆ ಮಣ್ಣಿನ ಎಸ್ ಬಿಸಿ ಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಭೂಕಂಪನ ಪ್ರತಿರೋಧವನ್ನು ಗಮನದಲ್ಲಿರಿಸಿಕೊಂಡು ಎಸ್ ಬಿಸಿಗೆ 1.25 ಅಂಶವನ್ನು ಬಳಸಲಾಗುತ್ತದೆ.

ಫೈನೈಟ್ ಎಲೆಮೆಂಟ್ ಮಾದರಿ

ಸಂರಚನಾ ವಿಶ್ಲೇಷಣೆ ಮಾಡಲು ನಿಸಾ/ ಸಿವಿಲ್ ಆವೃತ್ತಿ 16, ಸಾಫ್ಟ್ ವೇರ್ ಬಳಸಿ ಫೈನೈಟ್ ಎಲಿಮೆಂಟ್ ಮಾಡೆಲ್ ರೂಪಿಸಲಾಗುತ್ತದೆ. ಈ ಕೆಳಗಿನ ಸಂಗತಿಗಳನ್ನು ಆಧರಿಸಿ ಕಟ್ಟಡದ ಮಾದರಿ ನಿಗದಿಗೊಳಿಸಲಾಗುತ್ತದೆ.

ನಾಲ್ಕು ಸಂಗಮ ಬಿಂದುಗಳ (ಫೋರ್ ನೋಡ್ಸ್) ಶೆಲ್ ಎಲಿಮೆಂಟ್ ಗಳನ್ನು ಬಳಸಿ ಆರ್ ಸಿ ಸ್ಲ್ಯಾಬ್, ಆರ್ ಸಿ ವಾಲ್ ಗಳ ಮಾದರಿ ಸಿದ್ಧಪಡಿಸಲಾಗುತ್ತದೆ. ಆರ್ ಸಿ ಬೀಮ್ ಮತ್ತು ಕಾಲಂಗಳು ಎರಡು ಸಂಗಮ ಬಿಂದುಗಳ (ಟು ನೋಡ್ಸ್) ಬೀಮ್ ಎಲಿಮೆಂಟ್ ಗಳಾಗಿದ್ದು ಪ್ರತಿ ನೋಡ್ ಗೆ 6 ಡಿಗ್ರಿಗಳಷ್ಟು ವ್ಯತ್ಯಾಸ ಮುಕ್ತತೆ ಹೊಂದಿರುತ್ತವೆ.

ತಳಪಾಯ ವ್ಯವಸ್ಥೆ

ಗೋಡೆಗಳ ತಳಪಾಯವು ಸ್ಟ್ರಿಪ್ ಫೂಟಿಂಗ್ಸ್ ಅಥವಾ ರಾಫ್ಟ್ ಫೌಂಡೇಷನ್ ಆಗಿರುತ್ತದೆ.

ಡಿ.1 ವಿಭಾಗ-3. ಮೂಲಭೂತ ಭಾರ ಮತ್ತು ಸಂಯೋಜನೆಗಳು

ಸಾಮಾನ್ಯ

ವಸತಿ ಘಟಕದ ವಿನ್ಯಾಸಕ್ಕೆ ಪರಿಗಣಿಸುವ ಮೂಲಭೂತ ಭಾರ ಮತ್ತು ಭಾರ ಸಂಯೋಜನೆಗಳ ಕುರಿತು ಈ ಕೆಳಗೆ ಹೇಳಲಾಗಿದೆ.

ಮೂಲಭೂತ ಭಾರ

ಈ ಕೆಳಗಿನ ಭಾರಗಳನ್ನು ಪ್ರಮುಖವಾಗಿ ಪರಿಗಣಿಸಲಾಗಿದೆ.

15. ಲೋಡ್ ಕೇಸ್ ಐಡಿ-1; ಡೆಡ್ ಲೋಡ್ ಗಳು (ಡಿಎಲ್)

ಕಟ್ಟಡದ ಸ್ವಯಂ ಭಾರವನ್ನು ಸಾಫ್ಟ್ ವೇರ್ ಸ್ವಯಂಚಾಲಿತವಾಗಿ ಲೆಕ್ಕಹಾಕುತ್ತದೆ. ಆದರೆ ಇದಕ್ಕೆ ಒಳಪಡದ ಫ್ಲೋರ್ ಫಿನಿಷಿಂಗ್ ಮತ್ತಿತರ ಭಾರಗಳನ್ನು ಕಟ್ಟಡದ ಮೇಲೆ ಬೀಳುವ ಹೆಚ್ಚುವರಿ ಭಾರ (ಸೂಪರ್ ಇಂಪೋಸ್ಡ್ ಲೋಡ್) ಎಂದು ಪರಿಗಣಿಸಲಾಗುತ್ತದೆ.

ಸ್ವಯಂ ಭಾರ, ಫ್ಲೋರ್ ಫಿನಿಷ್= 1kN/m2, ಹೆಚ್ಚುವರಿ ಡೆಡ್ ಲೋಡ್= 0.5 kN/m2 ನ್ನು ಗುರುತ್ವದ ವಿರುದ್ಧದ ದಿಕ್ಕಿನಲ್ಲಿ (ಗ್ಲೋಬಲ್ Z) ಪ್ರೆಷರ್ ಲೋಡಿಂಗ್ ಎಂದು ಪರಿಗಣಿಸಲಾಗುತ್ತದೆ.

ತಗ್ಗಿನ ಭಾಗಗಳನ್ನು ಏರೇಟೆಡ್ ಕಾಂಕ್ರೀಟ್/ ಸಿಂಡರ್ ನಿಂದ ತುಂಬಲಾಗುತ್ತದೆ. ತಗ್ಗಿನ ಆಳ 400 ಮೀ.ಮೀ. ಎಂದು ಭಾವಿಸಿದರೆ ಏರೇಟೆಡ್ ಕಾಂಕ್ರೀಟ್/ ಸಿಂಡರ್ ನ ಸಾಂದ್ರತೆಯು 8kN/m3, 3.2kN/m2 ನ್ನು ಆ ಭಾಗಗಳಲ್ಲಿ ಗುರುತ್ವದ ವಿರುದ್ಧದ ದಿಕ್ಕಿನಲ್ಲಿ (ಗ್ಲೋಬಲ್ Z) ಹೆಚ್ಚುವರಿ ಪ್ರೆಷರ್ ಲೋಡಿಂಗ್ ಎಂದು ಪರಿಗಣಿಸಲಾಗುತ್ತದೆ.

16. ಲೋಡ್ ಕೇಸ್ ಐಡಿ- 2: ಲೈವ್ ಲೋಡ್ಸ್ (ಎಲ್ ಎಲ್)

ಸ್ಟಿಲ್ಟ್ ಮಟ್ಟಕ್ಕಿಂತ ಎಲ್ಲಾ ಅಂತಸ್ತುಗಳ ಸ್ಲ್ಯಾಬ್ ಗಳಿಗೆ ಸೂಪರ್ ಇಂಪೋಸ್ಡ್ ಲೈವ್ ಲೋಡ್= 2kN/m2ನ್ನು ಗುರುತ್ವದ ವಿರುದ್ಧದ ದಿಕ್ಕಿನಲ್ಲಿ (ಗ್ಲೋಬಲ್ Z ) ಪ್ರೆಷರ್ ಲೋಡಿಂಗ್ ಎಂದು ಪರಿಗಣಿಸಲಾಗುತ್ತದೆ. ಆದರೆ ಕಾರಿಡಾರ್ ಮತ್ತು ಸ್ಟೇರ್ ಕೇಸ್ ಜಾಗಗಳಿಗೆ 3kN/m2 ಲೈವ್ ಲೋಡ್ ಅನ್ವಯಿಸಲಾಗುತ್ತದೆ.

17. ಲೋಡ್ ಕೇಸ್ ಐಡಿ-3: ವಿಂಡ್ ಲೋಡ್ಸ್ (ಡಬ್ಲ್ಯುಎಲ್- ಗಾಳಿಯ ಭಾರ)+ X ದಿಕ್ಕು
ಬೇಸಿಕ್ ವಿಂಡ್ ಸ್ಪೀಡ್ (ಮೂಲಭೂತ ಗಾಳಿಯ ವೇಗ) 33 m/s
ಕೆ1 1.00
ಕೆ2 1.05
ಕೆ3 1.00
ಡಿಜೈನ್ ವಿಂಡ್ ಸ್ಪೀಡ್ 33 x 1.0 x 1.05 x 1.0
34.65 m/s
ಡಿಜೈನ್ ವಿಂಡ್ ಪ್ರೆಷರ್ 720.37 N/m2

ಆದರೆ, ಪ್ರೆಷರ್ ಲೋಡಿಂಗ್ ನ್ನು 1 kN/m2 ಎಂದು ಅನ್ವಯಿಸಲಾಗುತ್ತದೆ.

18. 18.ಲೋಡ್ ಕೇಸ್ ಐಡಿ-4: ವಿಂಡ್ ಲೋಡ್ಸ್ (ಡಬ್ಲ್ಯುಎಲ್)+ Y ದಿಕ್ಕು ಪ್ರೆಷರ್ ಲೋಡಿಂಗ್ ನ್ನು 1kN/m2 ಎಂದು ಪರಿಗಣಿಸಲಾಗುತ್ತದೆ.

1kN/m2 applied as pressure loading

19. ಲೋಡ್ ಕೇಸ್ ಐಡಿ-5: ಸೀಸ್ಮಿಕ್ ಲೋಡ್ಸ್ (ಎಸ್ಎಲ್)+ X ದಿಕ್ಕು (ನೆಲ+ ಮಹಡಿಗಳಿಗೆ)
ಜೋನ್ ಫ್ಯಾಕ್ಟರ್ 0.10
ಇಂಪಾರ್ಟೆನ್ಸ್ ಫ್ಯಾಕ್ಟರ್ 1.0
ರೆಸ್ಪಾನ್ಸ್ ರಿಡಕ್ಷನ್ ಫ್ಯಾಕ್ಟರ್ 5.0 for concrete
ಸೀಸ್ಮಿಕ್ ವೇಟ್ ಲೆಕ್ಕಾಚಾರದ ವೇಳೆ ಗಣನೆಗೆ ತೆಗೆದುಕೊಳ್ಳುವ % ಲೈವ್ ಲೋಡ್ 25%
ಮಣ್ಣಿನ ಮಾದರಿ ಸಾಧಾರಣ
ಕಟ್ಟಡದ ಎತ್ತರ (ತಳಪಾಯ ಮತ್ತು ಓವರ್ ಹೆಡ್ ಟ್ಯಾಂಕ್ ಒಳಗೊಂಡು)
ಪ್ರಯೋಗಿಸಲಾದ ಸೀಸ್ಮಿಕ್ ಬಲಕ್ಕೆ ಸಮಾನಾಂತರವಾಗಿ ಬೇಸ್ ಡೈಮೆನ್ಷನ್
  1. "INFILL WALLS" ಸಿದ್ಧಾಂತವನ್ನು ಆಧರಿಸಿ ಮೂಲಭೂತ ಕಾಲಾವಧಿಯನ್ನು ನಿರ್ಧರಿಸಲಾಗುತ್ತದೆ. ಅಂದರೆ, T= 0.09 H/ √d, ಇಲ್ಲಿ H= ಕಟ್ಟಡದ ಎತ್ತರ ಮೀಟರುಗಳಲ್ಲಿ, d= ಕಟ್ಟಡದ ಅಗಲ ಮೀಟರುಗಳಲ್ಲಿ. ಆದ್ದರಿಂದ T= 0.39s.
  2. ಐಎಸ್ 1893ರ (ಭಾಗ 1)-2002ರ Cl 7.8.1ಗೆ ಅನುಗುಣವಾಗಿ ‘ಸೂಡೊ ಸ್ಟ್ಯಾಟಿಕ್ ಅನಾಲಿಸಿಸ್’ ಮಾಡಲಾಗುತ್ತದೆ. (90 ಮೀಟರ್ ಗಿಂತ ಹೆಚ್ಚು ಎತ್ತರದ ಕಟ್ಟಡಗಳಿಗೆ ‘ಡೈನಾಮಿಕ್ ಅನಾಲಿಸಿಸ್’ (ಚಲನಶೀಲ ಅವಲೋಕನ) ಮಾಡಲಾಗುತ್ತದೆ.
  3. ಸೀಸ್ಮಿಕ್ ಬೇಸ್ ಶಿಯರ್ (ಭೂಕಂಪನ ಪಾರ್ಶ್ವ ಬಲ) Vb: Ah x W
    ಇಲ್ಲಿ,
    W - ಕಟ್ಟಡದ ಒಟ್ಟಾರೆ ಭೂಕಂಪನ ತೂಕ (ಕಟ್ಟಡದ ಒಟ್ಟು ತೂಕ+ ವಸ್ತು/ ಸಾಮಗ್ರಿಗಳ ಶೇ 25ರಷ್ಟು ತೂಕ)
    Ah – ಮೂಲಭೂತ ಕಾಲಾವಧಿಗೆ ಅನುಗುಣವಾಗಿ ಸಂಬಂಧಪಟ್ಟ ದಿಕ್ಕಿನ ‘ವಿನ್ಯಾಸ ಲಂಬ ವೇಗೋತ್ಕರ್ಷ’ (ಡಿಜೈನ್ ಹಾರಿಜಾಂಟಲ್ ಆಕ್ಸಲರೇಷನ್)
20. ಲೋಡ್ ಕೇಸ್ ಐಡಿ-6: ಸೀಸ್ಮಿಕ್ ಲೋಡ್ಸ್ (ಎಸ್ಎಲ್)+ Y ದಿಕ್ಕು (ನೆಲ+ ಮಹಡಿಗಳಿಗೆ)
ಜೋನ್ ಫ್ಯಾಕ್ಟರ್ 0.10
ಇಂಪಾರ್ಟೆನ್ಸ್ ಫ್ಯಾಕ್ಟರ್ 1.0
ರೆಸ್ಪಾನ್ಸ್ ರಿಡಕ್ಷನ್ ಫ್ಯಾಕ್ಟರ್ 5.0 for concrete
ಸೀಸ್ಮಿಕ್ ವೇಟ್ ಲೆಕ್ಕಾಚಾರದ ವೇಳೆ ಗಣನೆಗೆ ತೆಗೆದುಕೊಳ್ಳುವ % ಲೈವ್ ಲೋಡ್ 25%
ಮಣ್ಣಿನ ಮಾದರಿ ಸಾಧಾರಣ
ಕಟ್ಟಡದ ಎತ್ತರ (ತಳಪಾಯ ಮತ್ತು ಓವರ್ ಹೆಡ್ ಟ್ಯಾಂಕ್ ಒಳಗೊಂಡು)
ಪ್ರಯೋಗಿಸಲಾದ ಸೀಸ್ಮಿಕ್ ಬಲಕ್ಕೆ ಸಮಾನಾಂತರವಾಗಿ ಬೇಸ್ ಡೈಮೆನ್ಷನ್

ಭಾರ ಸಂಯೋಜನೆ

ಉಲ್ಲೇಖ ಐಎಸ್- 456: ಕೋಷ್ಠಕ 18

ಕೋಷ್ಠಕ 1: For Member Design (Limit State of Collapse)
Load Case ID 501 (DL + LL) Load Case ID 510 1.5(DL+WL(-Y))
Load Case ID 502 1.5(DL+LL) Load Case ID 511 1.2(DL+LL+WL(+X))
Load Case ID 503 1.5(DL+SL(+X)) Load Case ID 512 1.2(DL+LL+WL(-X))
Load Case ID 504 1.5(DL+SL(-X)) Load Case ID 513 1.2(DL+LL+WL(+Y))
Load Case ID 505 1.5(DL+SL(+Y)) Load Case ID 514 1.2(DL+LL+WL(-Y))
Load Case ID 506 1.5(DL+SL(-Y)) Load Case ID 515 1.2(DL+LL+SL(+X))
Load Case ID 507 1.5(DL+WL(+X)) Load Case ID 516 1.2(DL+LL+SL(-X))
Load Case ID 508 1.5(DL+WL(-X)) Load Case ID 517 1.2(DL+LL+SL(+Y))
Load Case ID 509 1.5(DL+WL(+Y)) Load Case ID 518 1.2(DL+LL+SL(-Y))

ಸೂಚನೆ: ಭಾರ ಸಂಯೋಜನೆ 501: DL + LL ನ್ನು ಮೆಂಬರ್ ಡಿಜೈನ್ ನಲ್ಲಿ (ಲಿಮಿಟ್ ಸ್ಟೇಟ್ ಆಫ್ ಕೊಲಾಪ್ಸ್) ಬಳಸುವುದಿಲ್ಲ. ಸಾಫ್ಟ್ ವೇರ್ ಪ್ರೋಗ್ರಾಮ್ ನೆರವಿನಿಂದ ಈ ಮೇಲಿನ ಭಾರ ಸಂಯೋಜನೆಗಳನ್ನು ಆಧರಿಸಿ ತಳಪಾಯದ ಸೈಜಿಂಗ್ ನ್ನು ನಿರ್ಧರಿಲಾಗುತ್ತದೆ. ಆ ಪ್ರಕಾರ, ಸಾಫ್ಟ್ ವೇರ್ ಪ್ರೋಗ್ರಾಮ್ ಸ್ವಯಂಚಾಲಿತವಾಗಿ ಈ ಕೆಳಗಿನ ಸಬ್ ಲೋಡ್ ಕಾಂಬಿನೇಷನ್ ಗಳನ್ನು ಮಾಡುತ್ತದೆ.

ಕೋಷ್ಠಕ 2: ತಳಪಾಯದ ಸೈಜಿಂಗ್ ಗಾಗಿ
Load Case ID 502 (DL+LL) Load Case ID 511 (DL+LL+WL(+X))
Load Case ID 503 (DL+SL(+X)) Load Case ID 512 (DL+LL+WL(-X))
Load Case ID 504 (DL+SL(-X)) Load Case ID 513 (DL+LL+WL(+Y))
Load Case ID 505 (DL+SL(+Y)) Load Case ID 514 (DL+LL+WL(-Y))
Load Case ID 506 (DL+SL(-Y)) Load Case ID 515 (DL+LL+SL(+X))
Load Case ID 507 (DL+WL(+X)) Load Case ID 516 (DL+LL+SL(-X))
Load Case ID 508 (DL+WL(-X)) Load Case ID 517 (DL+LL+SL(+Y))
Load Case ID 509 (DL+WL(+Y)) Load Case ID 518 (DL+LL+SL(-Y))
Load Case ID 510 (DL+WL(-Y))
ಗಡಿರೇಖೆ ನಿಬಂಧನೆಗಳು

ಸ್ಟಿಲ್ಟ್ ಮಟ್ಟಕ್ಕಿಂತ ಕೆಳಗಿನ ಭಾಗಕ್ಕೆ ನಿಗದಿತ ಗಡಿರೇಖೆ ನಿಬಂಧನೆಗಳನ್ನು (ಎಲ್ಲಾ ಮೂರು ದಿಕ್ಕುಗಳಲ್ಲಿ ಪರಿಭ್ರಮಣ ಮತ್ತು ಸ್ವರೂಪ ಬದಲಾವಣೆಗಳನ್ನು ನಿರ್ಬಂಧಿಸಿ) ಅನ್ವಯಿಸಲಾಗುತ್ತದೆ.

ಇ.1 ವಿಭಾಗ-4 ನಿರ್ಮಿತೀಯ ವಿಶ್ಲೇಷಣೆ ಮತ್ತು ಡಿಜೈನ್ ಎಫ್.1

ಸಾಮಾನ್ಯ

ವಿರೂಪತೆಗಳನ್ನು ಒಳಗೊಂಡಂತೆ ಡಿಜೈನ್ ಲೋಡ್ ಗಳಿಂದ ಸೃಷ್ಟಿಯಾಗುವ ಆಂತರಿಕ ಬಲಗಳನ್ನು ಲೆಕ್ಕಾಚಾರ ಹಾಕಲು ನೆರವಾಗುವ ಲೀನಿಯರ್ ಎಲಾಸ್ಟಿಕ್ ಥಿಯರಿಯನ್ನು ಆಧರಿಸಿ ನಿರ್ಮಿತೀಯ ವಿಶ್ಲೇಷಣೆ (ಸ್ಟ್ರಕ್ಚರಲ್ ಅನಾಲಿಸಿಸ್) ಮಾಡಲಾಗುತ್ತದೆ. ನಿಸಾ/ಸಿವಿಲ್ ವಿಶ್ಲೇಷಣೆ ಮತ್ತು ಡಿಜೈನ್ ಸಾಫ್ಟ್ ವೇರ್ ಪ್ಯಾಕೇಜ್ ನೆರವಿನಿಂದ ಇದನ್ನು ಮಾಡಲಾಗುತ್ತದೆ.

Minimum Thickness and Clear cover to main reinforcement:
Exposure Mild
Fire rating 2.0 Hours
ಕ್ರಮ ಸಂಖ್ಯೆ ಎಲಿಮೆಂಟ್ ಕನಿಷ್ಠ. ಗಾತ್ರ ಕವರ್ ಹೇಳಿಕೆ
1 ಸ್ಲ್ಯಾಬ್ 125mm 25mm
2 ಬೀಮ್ 200mm 40mm to links
3 ಕಾಲಂ 300mm 40mm to links
4 ಫೂಟಿಂಗ್ಸ್ 50mm ತಳಪಾಯದ ಕನಿಷ್ಠ ಆಳ 2.0 ಮೀಟರ್
5 ಗೋಡೆಗಳು 160mm 25mm ಟು ಫೇಸ್ ರೆಬಾರ್ ಮಿನಿಮಮ್ 0.4% ರೆಬಾರ್
100mm 50mm ಮಿಡ್ ಸೈಡ್ ರೆಬಾರ್ ಮಿನಿಮಮ್ 1.0% ರೆಬಾರ್
ಸ್ಟ್ರಕ್ಚರಲ್ ಡಿಜೈನ್ (ನಿರ್ಮಿತೀಯ ವಿನ್ಯಾಸ)

ನಿರ್ಮಿತೀಯ ಧಾತುಗಳ (ಸ್ಟ್ರಕ್ಚರಲ್ ಮೆಂಬರ್ಸ್ ಗಳ) ಸಂರಚನಾ ವಿನ್ಯಾಸವನ್ನು ಐಎಸ್ 456- 2000 ಪ್ರಕಾರ ಲಿಮಿಟ್ ಸ್ಟೇಟ್ ಡಿಜೈನ್ ಗೆ ಅನುಗುಣವಾಗಿ ನಡೆಸಲಾಗುತ್ತದೆ.

ಫೂಟಿಂಗ್ ಗಳ ವಿನ್ಯಾಸ (ಡಿಜೈನ್ ಆಫ್ ಫೂಟಿಂಗ್ಸ್): ಸೇವಾ ಸಾಧ್ಯತೆಗಳ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಫೂಟಿಂಗ್ಸ್ ಅಳತೆ ನಿರ್ಧರಿಸಲಾಗುತ್ತದೆ. ಬಲದ ಅಂಶವನ್ನು ದೃಷ್ಟಿಯಲ್ಲಿರಿಸಿಕೊಂಡು ಫೂಟಿಂಗ್ನ ಸಂರಚನಾ ವಿನ್ಯಾಸ ಮಾಡಲಾಗುತ್ತದೆ. ಎಸ್ ಬಿಸಿಯನ್ನು ಇಜಿಎಲ್ ನಿಂದ 1.5 ಮೀಟರ್ ಆಳದಲ್ಲಿ 12 T/Sqm ಎಂದು ಪರಿಭಾವಿಸಲಾಗುತ್ತದೆ. M25/ M30 ದರ್ಜೆಯ ಕಾಂಕ್ರೀಟ್ & FE-500/ FE-500D ರೆಬಾರ್ ನ್ನು ಪರಿಗಣಿಸಲಾಗುತ್ತದೆ. ಗ್ರೌಂಡ್+ ಸ್ಟೋರಿ ಫ್ಲೋರ್ ಗಳನ್ನು ಗಮನದಲ್ಲಿರಿಸಿಕೊಂಡು ಫೂಟಿಂಗ್ಸ್ ಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಫಲಿತಾಂಶಗಳನ್ನು ಅಪೆಂಡಿಕ್ಸ್ ನಲ್ಲಿ ನಮೂದಿಸಲಾಗುತ್ತದೆ.

ಶಿಯರ್ ವಾಲ್ ವಿನ್ಯಾಸ: ಪ್ರತಿ ಗೋಡೆಯ ಮೇಲೆ ಸಮತಲ ಮತ್ತು ಸಮತಲಕ್ಕೆ ಹೊರತಾದ ಒತ್ತಡ ಫಲಿತಗಳನ್ನು ಸಾಫ್ಟ್ ವೇರ್ ನೆರವಿನಿಂದ ಲೆಕ್ಕ ಹಾಕಲಾಗುತ್ತದೆ. ಐಎಸ್ 456 ಮತ್ತು ಐಎಸ್ 13920 ಪ್ರಕಾರ ನಿರ್ಮಿತೀಯ ಕ್ಷಮತೆಯನ್ನು ಕಂಡುಹಿಡಿಯಲು ಈ ಬಲಗಳನ್ನು ಬಳಸಿಕೊಳ್ಳಲಾಗುತ್ತದೆ. . M25/ M30 ದರ್ಜೆಯ ಕಾಂಕ್ರೀಟ್ FE- 500/ FE-500D ರೆಬಾರ್ ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ನೆಲಮಟ್ಟ+ ಅಂತಸ್ತುಗಳನ್ನು ಗಮನದಲ್ಲಿರಿಸಿಕೊಂಡು ಶಿಯರ್ ವಾಲ್ ಗಳನ್ನು ವಿನ್ಯಾಸಗೊಳಿಸಲಾಗುತ್ತದೆ.

ವಿನ್ಯಾಸ ಲೆಕ್ಕಾಚಾರಗಳ ಫಲಿತಾಂಶಗಳು

ಸಾಫ್ಟ್ ವೇರ್ ಬಳಸಿ ಕಾಲಂ, ಬೀಮ್, ಸ್ಲ್ಯಾಬ್ ಮತ್ತು ಫೂಟಿಂಗ್ ಗಳ ಬಲವರ್ಧನೆ ಮಾಡಲಾಗುತ್ತದೆ. IS13920 & IS 456 ಗೆ ಅನುಗುಣವಾಗಿ ಶಿಯರ್ ವಾಲ್ ಗಳ ಗಣಕ ಸಂಯೋಜನೆ (ಕಾಂಪ್ಯುಟೇಷನ್) ಮಾಡಲಾಗುತ್ತದೆ.