ರಸ್ತೆ & ನೀರಾವರಿ ನಾಲೆಗಳ ನಿರ್ಮಾಣ ಸೇವೆ

ನಮ್ಮ ಗ್ರಾಹಕರಿಗಾಗಿ ಹೆದ್ದಾರಿ ನಿರ್ಮಾಣ ಸೇವೆಗಳನ್ನು ಕೂಡ ನಾವು ಒದಗಿಸುತ್ತೇವೆ. ನಾವು ನಿರ್ಮಿಸಿರುವ ರಸ್ತೆಗಳ ದೀರ್ಘಾವಧಿ ಬಾಳಿಕೆ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಹೆಚ್ಚು ಕಾಲ ಸೇವೆ ಒದಗಿಸುವಿಕೆ ಹಾಗೂ ನಿರ್ವಹಣೆ ಶೂನ್ಯವಾಗಿರುವಂತೆ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಸೇತುವೆಗಳ ನಿರ್ಮಾಣ ವೇಳೆ ಅದಕ್ಕೆ ಬಳಸುವ ಪೂರಕ ಸಾಮಗ್ರಿಗಳ ಅಳತೆ ಕರಾರುವಾಕ್ಕಾಗಿರುವುದನ್ನು ಖಾತ್ರಿ ಪಡಿಸುವ ಸಲುವಾಗಿ ಅವನ್ನು ನಿರ್ಮಾಣ ತಾಣದಲ್ಲೇ ತಯಾರಿಸಲಾಗುತ್ತದೆ.

ರಾಜ್ಯ ರಾಜ್ಯಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಗಳು ರಾಷ್ಟ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹೆದ್ದಾರಿಗಳ ನಿರ್ಮಾಣ ಮತ್ತು ಸುಧಾರಣೆಯು ಅಧಿಕ ಬಂಡವಾಳ, ಮಾನವ ಸಂಪನ್ಮೂಲ, ಶಕ್ತಿಯುತ ತಾಂತ್ರಿಕ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳನ್ನು ಬೇಡುತ್ತದೆ. ಕಠಿಣ ಗುಣಮಟ್ಟ ಮಾಪನಕ್ಕೆ ಅನುಗುಣವಾಗಿ ಕನಿಷ್ಠ ಕಾಲಮಿತಿಯಲ್ಲಿ ಹಾಲಿ ಇರುವ ಸಂಚಾರ ದಟ್ಟಣೆಯನ್ನು ನಿರ್ವಹಿಸಿಕೊಂಡು ಹೆದ್ದಾರಿಗಳನ್ನು ಸುಧಾರಿಸುವುದು ಸಮರ್ಪಕ ಯೋಜನೆ ಮತ್ತು ನಿಖರ ಅನುಷ್ಠಾನವನ್ನು ಅಪೇಕ್ಷಿಸುವ ಸವಾಲಾಗಿರುತ್ತದೆ. ನಮ್ಮ ಸಮೂಹವು ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಇಂತಹ ಹಲವಾರು ಹೆದ್ದಾರಿ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದೆ. ಹಲವಾರು ಪ್ರಮುಖ ನಗರಗಳಲ್ಲಿ ಬೈಪಾಸ್ ರಸ್ತೆಗಳನ್ನು ನಿರ್ಮಿಸುವ ಮೂಲಕ ಸುಗಮ ಸಾಗಣೆಯನ್ನು ಖಾತ್ರಿಗೊಳಿಸಿದೆ..

ರಾಷ್ಟ್ರದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಹಾಗೂ ಮನೆ ಬಳಕೆಗೆ ಬೇಕಾದ ನೀರಿನ ಸಂಪನ್ಮೂಲ ಕಲ್ಪಿಸಲು ನೀರಾವರಿ ಕಾಲುವೆಗಳು ಅತ್ಯಗತ್ಯ. ಬ್ಯಾರೇಜ್ ಗಳ ನಿರ್ಮಾಣ, ಮಣ್ಣಿನ ಸವಕಳಿ- ಸೋರಿಕೆ- ನೀರಿನ ಸರಾಗ ಹರಿಯುವಿಕೆಗೆ ಅಗತ್ಯವಾದ ಬಲವರ್ಧನೆಯನ್ನು ನಾಲೆ ನಿರ್ಮಾಣದ ವೇಳೆ ಗಮನದಲ್ಲಿರಿಸಿಕೊಳ್ಳಬೇಕಾಗುತ್ತದೆ. ನಮ್ಮ ಸಮೂಹವು ಕರ್ನಾಟಕ ರಾಜ್ಯದ ಹತ್ತು ಹಲವೆಡೆ ಇಂತಹ ನಾಲೆಗಳನ್ನು ವಿನ್ಯಾಸಗೊಳಿಸಿ ನಿರ್ಮಿಸುವ ಮೂಲಕ ಕೃಷಿ ಹಾಗೂ ಗೃಹ ಬಳಕೆಗೆ ನೀರಿನ ಸೌಲಭ್ಯ ಲಭ್ಯವಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ.